alex Certify ‘ಚಕಾ ಚಕ್’ ಹಾಡಿಗೆ ಸೊಂಟ ಬಳುಕಿಸಿದ ನಟಿ ಸಾರಾ ಅಲಿ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಚಕಾ ಚಕ್’ ಹಾಡಿಗೆ ಸೊಂಟ ಬಳುಕಿಸಿದ ನಟಿ ಸಾರಾ ಅಲಿ ಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ತಮ್ಮ ಮುಂಬರುವ ಚಿತ್ರ ಅತ್ರಾಂಗಿ ರೇ ಯ ಚಕಾ ಚಕ್ ಹಾಡಿಗೆ ಸೊಂಟ ಬಳುಕಿಸಿದ್ದು, ಜನರನ್ನು ಮಂತ್ರ ಮುಗ್ಧಗೊಳಿಸುವಂತೆ ಮಾಡಿದೆ.

ಸೋಮವಾರದಂದು ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು, ಮದುವೆ ತಯಾರಿಯನ್ನೊಳಗೊಂಡಾಗ ಮಾಡಿರುವ ನೃತ್ಯ ಇದಾಗಿದೆ. ಹಸಿರು ಬಣ್ಣದ ಸೀರೆಯನ್ನು ಧರಿಸಿರುವ ನಟಿ ಸಾರಾ ಅಲಿ ಖಾನ್, ಚಕಾ ಚಕ್ ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

ಸಿನಿಮಾದ ಕಥೆಯಂತೆ, ನಟ ಧನುಷ್‌ನ ಮದುವೆಯ ಸಂಭ್ರಮದಲ್ಲಿ ಸಾರಾ ಹಾಡಿಗೆ ಕುಣಿದಿದ್ದಾರೆ. ಇಬ್ಬರೂ ತಮ್ಮ ಹಳ್ಳಿಗೆ ಮರಳಿದ ನಂತರ, ಅವರು ಬೇರೆ-ಬೇರೆಯಾಗಲು ನಿರ್ಧರಿಸುತ್ತಾರೆ. ಧನುಷ್ ತನ್ನ ಕುಟುಂಬದ ಸಮ್ಮುಖದಲ್ಲಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಒಪ್ಪುತ್ತಾರೆ. ಈ ವೇಳೆ ಮದುವೆಗೆ ಎಲ್ಲಾ ಸಿದ್ಧತೆ ನಡೆಯುತ್ತಿದ್ದ ವೇಳೆ ಸಾರಾಳ ಈ ನೃತ್ಯ ಕಣ್ಮನ ಸೆಳೆದಿದೆ.

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಡನ್ನು ಸಂಯೋಜಿಸಿದ್ದು, ಶ್ರೇಯಾ ಘೋಷಾಲ್ ಅವರ ಧ್ವನಿಯಿದೆ. ವಿಜಯ್ ಗಂಗೂಲಿ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಾರಾ ಅಲಿ ಖಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ಸಾಹಿತ್ಯವನ್ನು ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿನ ಮೂವರು ನಾಯಕರಲ್ಲಿ ಒಬ್ಬರಾಗಿರುವ ನಟ ಅಕ್ಷಯ್ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ. ಸಾರಾಳ ಅದ್ಭುತ ನೃತ್ಯದ ಚಲನೆಯು ನಿಮ್ಮ ಹೃದಯವನ್ನು ಕುಣಿಯುವಂತೆ ಮಾಡಬಹುದು ಎಂದು ಟ್ವೀಟ್ ಮಾಡಿದ್ದಾರೆ.

ವಿಡಿಯೋ ವೀಕ್ಷಿಸಿ:

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...