alex Certify ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಹುಡುಗನ ಬೊಂಬಾಟ್‌ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಹುಡುಗನ ಬೊಂಬಾಟ್‌ ಡಾನ್ಸ್

ಹಾಡು ಹಾಗೂ ನೃತ್ಯದ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತದೆ. ಇದೀಗ ಈ ಸಾಲಿಗೆ ಪುಟ್ಟ ಪೋರನೊಬ್ಬ 2019ರ ಗಲ್ಲಿ ಬಾಯ್​ ಸಿನಿಮಾದ ‌ʼಅಪ್ನಾ ಟೈಮ್​ ಆಯೇಗಾʼ ಎಂದು ಹಾಡು ಹೇಳುತ್ತಿರುವ ವಿಡಿಯೋ ಕೂಡ ಸೇರಿದೆ.

ಬಾಕ್ಸರ್‌ ಮೈಕ್‌ ಟೈಸನ್‌ ಗೆ ಧ್ವನಿಯಾಗುತ್ತಿದ್ದಾರೆ ’ಬಾಲಯ್ಯ’

ಈಶಾನ್ಯ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಬಾಲಕ ಈ ಹಾಡನ್ನು ಹಾಡುತ್ತಾ ನೃತ್ಯವನ್ನೂ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಧೂಳೆಬ್ಬಿಸಿದೆ. ಹಾಡುವ ವೇಳೆ ಬಾಲಕ ತೋರಿದ ಉತ್ಸಾಹವು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಪ್ರತಿಭೆಯು ಎಲ್ಲಿ ಬೇಕಿದ್ದರೂ ಕಾಣಸಿಗಬಹುದು. ಅರುಣಾಚಲ ಪ್ರದೇಶದ ಮನ್ಪಾ ನಿವಾಸಿಯಾದ ಬಾಲಕ ಬಾಲಿವುಡ್​​ ರ್ಯಾಪ್​ ಹಾಡನ್ನು ಹಾಡುತ್ತಿದ್ದಾನೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಬಗ್ಗೆ NCB ಅಧಿಕಾರಿಗಳಿಂದ ಮಹತ್ವದ ಮಾಹಿತಿ

ಈ ಹಾಡನ್ನು ಡಿವೈನ್​ ಹಾಗೂ ಅಂಕುರ್​​ ತಿವಾರಿ ಬರೆದಿದ್ದಾರೆ. ಜೋಯಾ ಅಕ್ತರ್​ ನಿರ್ದೇಶನದ ಸಿನಿಮಾ ʼಗಲ್ಲಿ ಬಾಯ್​ʼನಲ್ಲಿ ರಣವೀರ್​ ಸಿಂಗ್​ ಹಾಗೂ ಆಲಿಯಾ ಭಟ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

— Yuva Arunachal (@YuvaArunachal) October 5, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...