alex Certify ತಂದೆ ಸಚಿನ್ ಹಾದಿಯಲ್ಲೇ ಅರ್ಜುನ್: ಈ ಕಾರಣಕ್ಕೆ ಇತಿಹಾಸ ಪುಟದಲ್ಲಿ ಅಪ್ಪ-ಮಗ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಸಚಿನ್ ಹಾದಿಯಲ್ಲೇ ಅರ್ಜುನ್: ಈ ಕಾರಣಕ್ಕೆ ಇತಿಹಾಸ ಪುಟದಲ್ಲಿ ಅಪ್ಪ-ಮಗ ದಾಖಲು

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ ಮುಂಬೈ ಇಂಡಿಯನ್-ಕೋಲ್ಕತ್ತಾ ನೈಡ್ ರೈಡರ್ಸ್ ಪಂದ್ಯ ತೆಂಡೂಲ್ಕರ್ ಕುಟುಂಬಕ್ಕೆ ವಿಶೇಷವಾಗಿತ್ತು.

ಕಾರಣ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ ತಂಡದ ಪರವಾಗಿ ಐಪಿಎಲ್‌ನಲ್ಲಿ ಮೊದಲ ಪಂದ್ಯವನ್ನ ಆಡಲು ಕಣಕ್ಕಿಳಿದಿದ್ದರು.

ಬಹಳ ಸಮಯದಿಂದ ಆಟ ಆಡುವುದಕ್ಕೆ ಕಾಯುತ್ತಿದ್ದ ಅರ್ಜುನ್ ಕೊನೆಗೂ ಈ ಬಾರಿ ಆಡುವ ಅದೃಷ್ಟ ಒದಗಿ ಬಂದಿತ್ತು. ವಿಶೇಷ ಏನಂದರೆ ಮುಂಬೈ ಪರ ಚೊಚ್ಚಲ ಪಂದ್ಯದಲ್ಲಿ ಅರ್ಜುನ್ ಈ ಪಂದ್ಯದ ಮೊದಲ ಓವರ್‌ ಮಾಡಿದ್ದು ಈ ಆಟವನ್ನ ಇನ್ನಷ್ಟು ಸ್ಮರಣೀಯವನ್ನಾಗಿ ಮಾಡಿತ್ತು. ಅರ್ಜುನ್ ಮತ್ತು ಸಚಿನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಮೊದಲ ತಂದೆ-ಮಗ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅರ್ಜುನ್ ಅವರಂತೆ ತಂದೆ ಸಚಿನ್ ಕೂಡ ಮುಂಬೈ ಇಂಡಿಯನ್ ಪರ ಆಡಿದ್ದರು. ಇನ್ನೂ ಅರ್ಜುನ್ ತಮ್ಮ ಮೊದಲ ಓವರ್‌ನಲ್ಲಿ ಕೇವಲ 5 ರನ್ ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟಿದ್ದರು. ವಿಸ್ಮಯಕಾರಿ ಸಂಗತಿ ಏನಂದರೆ 2009ರಲ್ಲಿ MI ತಂಡದ ವಿರುದ್ಧ ಲೆಜೆಂಡರಿ ಸಚಿನ್ ತೆಂಡೂಲ್ಕರ್ ಆಡುವಾಗ ಅವರು ಸಹ ಮೊದಲ ಓವರ್‌ ಬೌಲಿಂಗ್ ಮಾಡಿದಾಗ ಕೇವಲ 5 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಇಲ್ಲೂ ಸಹ ಇತಿಹಾಸ ಪುನರಾವರ್ತನೆ ಆದಂತಾಗಿದೆ. ಅರ್ಜುನ್ ಅವರನ್ನು 2021 ರಲ್ಲಿ ಮೊದಲ ಬಾರಿಗೆ ಮುಂಬೈ ತಂಡದಲ್ಲಿ ಸೇರಿಸಲಾಯಿತು ಆದರೆ ಅವರಿಗೆ ಪ್ಲೇಯಿಂಗ್ XI ಆಡಲು ಅವಕಾಶ ಸಿಗಲಿಲ್ಲ. ಆದರೆ, ಸುದೀರ್ಘ ಕಾಯುವಿಕೆಯ ನಂತರ ಕೆಕೆಆರ್ ವಿರುದ್ಧ ಕಣಕ್ಕಿಳಿದಿದ್ದರು.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...