alex Certify ಅರೇಂಜ್ಡ್ ಮ್ಯಾರೇಜ್ ಆಗ್ತಿದ್ದೀರಾ…..? ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರೇಂಜ್ಡ್ ಮ್ಯಾರೇಜ್ ಆಗ್ತಿದ್ದೀರಾ…..? ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ…

ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸ. ಏಕೆಂದರೆ ನಮ್ಮ ನಿರ್ಧಾರ ಇಡೀ ಜೀವನದ ಮೇಲೆ ಪರಿಣಾಮ ಬೀರಬಹುದು. ಅರೇಂಜ್ಡ್ ಮ್ಯಾರೇಜ್‌ಗಳಲ್ಲಿ ಕುಟುಂಬದ ಬೆಂಬಲ ಹೆಚ್ಚು. ಭಾರತದಲ್ಲಿ ಗಂಡು ಮಕ್ಕಳು ಹೇಗಿರುತ್ತಾರೆ ಎಂಬುದಕ್ಕಿಂತ ಮನೆಯವರು ಹುಡುಗಿಯನ್ನು ಹೇಗೆ ಇಷ್ಟಪಡುತ್ತಾರೆ ಎಂಬುದೇ ಮುಖ್ಯ. ಕುಟುಂಬಗಳ ನಿರ್ಧಾರದ ಬಳಿಕ ಹುಡುಗ ಮತ್ತು ಹುಡುಗಿಯ ಆಯ್ಕೆಯನ್ನು ಕೇಳಲಾಗುತ್ತದೆ.

ಸರಿಯಾದ ಜೀವನ ಸಂಗಾತಿ ಸಿಕ್ಕರೆ ನಮ್ಮ ಬದುಕೇ ಬದಲಾಗಬಹುದು. ನೀವು ಸಂತೋಷವಾಗಿರುತ್ತೀರಿ. ಆದರೆ ಸಂಗಾತಿಯ ಆಯ್ಕೆಯಲ್ಲಿ ಎಡವಿದರೆ ಮದುವೆಯಾದ ನಂತರವೂ ಅನೇಕ ಬಾರಿ ಜನರು ತಮ್ಮ ಜೀವನದುದ್ದಕ್ಕೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅರೇಂಜ್ಡ್ ಮ್ಯಾರೇಜ್‌ನಲ್ಲಿ ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ಜನರು ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪುಗಳು ಯಾವುವು ಎಂಬುದನ್ನು ತಿಳಿದುಕೊಂಡರೆ ಈ ಬಗ್ಗೆ ಜಾಗೃತರಾಗಿರಬಹುದು.

ಅನೇಕ ಬಾರಿ ಸೂಕ್ತ ಸಮಯ ತೆಗೆದುಕೊಳ್ಳದೇ ಅವಸರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪರಸ್ಪರ ಅರ್ಥಮಾಡಿಕೊಳ್ಳಲು ಸಮಯವನ್ನು ನೀಡುವುದು ಬಹಳ ಮುಖ್ಯ. ಅರೇಂಜ್ಡ್ ಮ್ಯಾರೇಜ್‌ನಲ್ಲಿರುವ ಜನರ ಕುಟುಂಬದ ಹಿನ್ನೆಲೆ, ಕುಟುಂಬದ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಸ್ಥಿತಿಯಂತಹ ವಿಷಯಗಳಿಗೆ ಹೆಚ್ಚಾಗಿ ಆದ್ಯತೆ ನೀಡಲಾಗುತ್ತದೆ.

ಈ ಎಲ್ಲಾ ವಿಷಯಗಳನ್ನು ನೋಡುವುದು ಮುಖ್ಯ, ಆದರೆ ನೀವು ಭಾವನಾತ್ಮಕ ಮತ್ತು ಜೀವನಶೈಲಿಯ ಹೊಂದಾಣಿಕೆಯನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದರಿಂದಲೇ ಭವಿಷ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಹುದು.

ಅನೇಕ ಬಾರಿ ಕುಟುಂಬದ ಒತ್ತಡಕ್ಕೆ ಒಳಗಾಗಿ ಅವರ ಆದ್ಯತೆಗಳು ಮತ್ತು ಆಶಯಗಳನ್ನು ನಿರ್ಲಕ್ಷಿಸುತ್ತಾರೆ. ಜೀವನ ಸಂಗಾತಿಯನ್ನು ಆಯ್ಕೆಮಾಡುವ ಮೊದಲು ನಿಮ್ಮ ಆದ್ಯತೆಗಳು ಮತ್ತು ಇಚ್ಛೆಯ ಬಗ್ಗೆ ಕುಟುಂಬಕ್ಕೆ ತಿಳಿಸುವುದು ಮುಖ್ಯ. ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಜೀವನ ಸಂಗಾತಿಯ ಹುಡುಕಾಟ ನಡೆಸಬೇಕು.

ಕುಟುಂಬದವರು ಅಥವಾ ಹೊರಗಿನವರ ಒತ್ತಡಕ್ಕೆ ಒಳಗಾಗಿ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ. ವಿವಾಹವು ಯಶಸ್ವಿಯಾಗಬೇಕೆಂದು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಮತ್ತು ಸಂವಹನ ಮಾಡುವುದು ಮುಖ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...