alex Certify ಬಯೋಬಬಲ್​ ಆದೇಶ ಉಲ್ಲಂಘಿಸಿ ವಿವಾದಕ್ಕೀಡಾದ ಕ್ರಿಕೆಟಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಯೋಬಬಲ್​ ಆದೇಶ ಉಲ್ಲಂಘಿಸಿ ವಿವಾದಕ್ಕೀಡಾದ ಕ್ರಿಕೆಟಿಗರು…!

ಶ್ರೀಲಂಕಾ ಕ್ರಿಕೆಟಿಗರಾದ ನಿರೋಶನ್​ ಡಿಕ್​ವೆಲ್ಲಾ ಹಾಗೂ ಕುಸಲ್​ ಮೆಂಡಿಸ್​​ ವಿರುದ್ಧ ಬಯೋಬಬಲ್​ ಉಲ್ಲಂಘನೆಯ ಆರೋಪ ಎದುರಾಗಿದೆ. ಇಂಗ್ಲೆಂಡ್​ ವಿರುದ್ಧದ ಸಿಮೀತ ಓವರ್​ಗಳ ಸರಣಿಯಲ್ಲಿ ಶ್ರೀಲಂಕಾ ತಂಡದ ಸದಸ್ಯರಾಗಿರುವ ಈ ಆಟಗಾರರು ಹೊಸ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ.

ಈ ಇಬ್ಬರು ಆಟಗಾರರು ಇಂಗ್ಲೆಂಡ್​ ಡುರ್ಹಾಮ್​ ಪಟ್ಟಣದಲ್ಲಿ ನೈಟ್​ ಔಟ್​ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ವಿವಾದದ ಕೇಂದ್ರ ಬಿಂದುವಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ರೌಂಡ್ಸ್ ಹಾಕುತ್ತಿರುವ ವಿಡಿಯೋದಲ್ಲಿ ಶ್ರೀಲಂಕಾದ ಈ ಇಬ್ಬರು ಆಟಗಾರರು ಬಯೋಬಬಲ್​ ನಿಯಮ ಉಲ್ಲಂಘಿಸಿ ನೈಟ್​​ಔಟ್​ಗೆ ಹೋಗಿದ್ದಾರೆ. ಮೆಂಡಿಸ್​ ಕೈಯಲ್ಲಿ ಬಿಳಿ ಬಣ್ಣದ ಸಿಗರೇಟ್​ ಮಾದರಿಯ ವಸ್ತು ಇರೋದನ್ನ ಕಾಣಬಹುದಾಗಿದೆ. ಮೆಂಡಿಸ್​ ಪಕ್ಕದಲ್ಲಿ ಡಿಕ್​ವೆಲ್ಲಾ ನಿಂತಿದ್ದಾರೆ.

ಈ ವಿಡಿಯೋ ನೋಡಿದ ಅಭಿಮಾನಿಗಳು, ಅರೆ..! ಇವರಿಬ್ಬರು ಯಾರಿಂದ ತಪ್ಪಿಸಿಕೊಳ್ಳೋಕೆ ಪ್ರಯತ್ನಿಸುತ್ತಿದ್ದಾರೆ..? ಇವರು ಧೂಮಪಾನ ಮಾಡುತ್ತಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಸಂಬಂಧ ಶ್ರೀಲಂಕಾ ಕ್ರಿಕೆಟ್​ ಮಂಡಳಿ ತನಿಖೆ ನಡೆಸುತ್ತಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಶಮ್ಮಿ ಸಿವ ಹೇಳಿದ್ದಾರೆ. ಶ್ರೀಲಂಕಾ ಟೀಂ ಮ್ಯಾನೇಜರ್​ ಮನುಜಾ ಕರಿಯಪ್ಪೆರುಮಾ ಕೂಡ ತನಿಖೆ ನಡೆಯುತ್ತಿದೆ ಎಂಬ ವಿಚಾರವನ್ನ ದೃಢೀಕರಿಸಿದ್ದಾರೆ.

— Nibraz Ramzan (@nibraz88cricket) June 28, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...