alex Certify ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಕ್ಕೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಕ್ಕೆ ಅರ್ಜಿ ಆಹ್ವಾನ

ಮೀನುಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನಿಂದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ (4.1) ಹಿತ್ತಲಿನ ಅಲಂಕಾರಿಕ ಮೀನು ಸಾಕಾಣಿಕೆ ಘಟಕ. 2. (5.4) ಬ್ಯಾಕ್ಯಾರ್ಡ್ ಮಿನಿ ಆರ್‍ಎಎಸ್ ಘಟಕಗಳ ಸ್ಥಾಪನೆ. (1.4)ಹೊಸಮೀನು ಕೃಷಿ ಕೊಳ ನಿರ್ಮಾಣ(ಪ.ಜಾತಿ). (1.12) ಸಿಹಿ ನೀರಿನ ಪ್ರದೇಶಗಳಿಗೆ ಬಯೋಫೆÇ್ಲೀಕ್ ಕೊಳಗಳನಿರ್ಮಾಣ, (ಹೆಕ್ಟೇರಿಗೆ 4 ಲಕ್ಷರೂ ಹೂಡಿಕೆ ವೆಚ್ಚ ಸೇರಿದಂತೆ). ಮತ್ತು (11.2) ಸಾಂಪ್ರದಾಯಿಕ ಮೀನುಗಾರರಿಗೆ ಯಾಂತ್ರಿಕೃತ ಎಫ್‍ಆರ್‍ಪಿ ದೋಣಿಗಳು ಖರೀದಿಗೆ ಸಹಾಯಧನ. ಯೋಜನೆಗಳನ್ನು ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಅಕ್ಟೋಬರ್, 31 ಕೊನೆಯ ದಿನವಾಗಿದೆ. ಈ ಉಪ ಯೋಜನೆ ಪ್ರಾರಂಭಿಸಲು ಶೇ.40 ರಷ್ಟು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಮತ್ತು ಶೇ.60 ರಷ್ಟು ಪ.ಜಾತಿ/ ಪ.ಪಂಗಡ/ ಮಹಿಳಾ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಡಿಕೇರಿ, ಪೊನ್ನಂಪೇಟೆ ಮತ್ತು ಸೋಮವಾರಪೇಟೆ ಅವರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...