alex Certify ಐಫೋನ್ 13 ಬೆಲೆಯಲ್ಲಿ ಭಾರೀ ಇಳಿಕೆ….! ಖರೀದಿಸಲು ಇದು ಸಕಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಫೋನ್ 13 ಬೆಲೆಯಲ್ಲಿ ಭಾರೀ ಇಳಿಕೆ….! ಖರೀದಿಸಲು ಇದು ಸಕಾಲ

ಅಮೆಜಾನ್ ನಲ್ಲಿ, ಆ್ಯಪಲ್ ಐಫೋನ್ 13 ಮಾಡೆಲ್‌ಗಳನ್ನು ಇತರ ಬ್ಯಾಂಕ್ ಕೊಡುಗೆಗಳೊಂದಿಗೆ ರಿಯಾಯಿತಿಯಲ್ಲಿ ಈಗಾಗ್ಲೇ ಮಾರಾಟ ಮಾಡಲಾಗಿದೆ. ಪ್ರಸ್ತುತವಾಗಿ 128GB, 256GB ಮತ್ತು 512GB ಸೇರಿ ಎಲ್ಲಾ ಮೂರು ಸ್ಟೋರೇಜ್ ಕಾನ್ಫಿಗರೇಶನ್‌ಗಳು,‌ 5,000 ರೂ. ತಕ್ಷಣದ ರಿಯಾಯಿತಿಯೊಂದಿಗೆ ಲಭ್ಯವಿದೆ. ಹೀಗಾಗಿ ಈ ತಕ್ಷಣದ ರಿಯಾಯಿತಿ ಹಾಗೂ ನಾವು ಮುಂದೇ ಹೇಳಲಿರುವ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಒಳ್ಳೆ ಡೀಲ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ಅಮೆಜಾನ್ ನೀಡಿರುವ ರಿಯಾಯಿತಿಯ ಪರಿಣಾಮವಾಗಿ, ಸ್ಟ್ಯಾಂಡರ್ಡ್ 128GB ಮಾದರಿಯ ಬೆಲೆ 74,900 ರೂ, 256GB ಮಾದರಿಯ ಬೆಲೆ 84,900 ರೂ., 1,04,900 ರೂ.ಗೆ ನೀವು ಟಾಪ್ 512GB ಮಾದರಿ ಖರೀದಿಸಬಹುದು(ಕನಿಷ್ಠ ಕೆಂಪು ಮತ್ತು ಗುಲಾಬಿ ಬಣ್ಣಗಳಲ್ಲಿ). ಇ-ಕಾಮರ್ಸ್ ಸೈಟ್ ತಕ್ಷಣದ ಕಡಿತವನ್ನು ಹೇಗೆ ಒದಗಿಸುತ್ತಿದೆ ಎಂಬುದು ಅಸ್ಪಷ್ಟವಾಗಿದೆ.

ಕರಾವಳಿ To ಕುಂದಾನಗರಿ; ಬೆಳಗಾವಿ ಕಾಲೇಜಿಗೂ ವ್ಯಾಪಿಸಿದ ಹಿಜಾಬ್ ವಿವಾದ

ಕೋಟಕ್ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ಐಸಿಐಸಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು 6,000 ರೂ. ರಿಯಾಯಿತಿಯನ್ನು ಪಡೆಯುತ್ತಾರೆ. ನೀವು Amazon Pay ಅಥವಾ ICICI ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ನೀವು ಚೆಕ್‌ಔಟ್‌ ಮಾಡಿದಾಗ 3,603 ರೂ.ಗಳಷ್ಟು ಕ್ಯಾಶ್ ಬ್ಯಾಕ್ ಪಡೆಯುವಿರಿ.

ಇದರ ಜೊತೆಗೆ ಅಮೆಜಾನ್ ಸಹ 16,800 ರೂಪಾಯಿ ಮೌಲ್ಯದವರೆಗರ ವಿನಿಮಯ ವ್ಯವಹಾರವನ್ನು ನೀಡುತ್ತಿದೆ. ಉತ್ತಮ ಕಾರ್ಯನಿರ್ವಹಣೆಯ ಕ್ರಮದಲ್ಲಿರುವ ಹಳೆಯ ಐಫೋನ್‌ಗಳು ಆಂಡ್ರಾಯ್ಡ್ ಸೆಲ್‌ಫೋನ್‌ಗಳಿಗಿಂತ ಹೆಚ್ಚಿನ ವಿನಿಮಯ ದರವನ್ನು ಪಡೆಯುವ ಸಾಧ್ಯತೆಯಿದೆ. ಉದಾಹರಣೆಗೆ, iPhone 7 (128GB) “ಬಾಡಿ ಅಥವಾ ಸ್ಕ್ರೀನ್‌ನಲ್ಲಿ ಯಾವುದೇ ಗೀರುಗಳು, ಡೆಂಟ್‌ಗಳು ಅಥವಾ ಬಿರುಕುಗಳನ್ನು ಹೊಂದಿಲ್ಲದಿದ್ದರೆ, ಅಮೆಜಾನ್ ಅದನ್ನು 7,150 ರೂ.ಗಳಿಗೆ ವಿನಿಮಯ ಮಾಡಿಕೊಳ್ಳುತ್ತದೆ. ದೇಹದ ಮೇಲೆ ಡೆಂಟ್ ಮತ್ತು ಗೀರುಗಳಿರುವ ಮಾದರಿಯು 5,000 ರೂ.ವರೆಗೆ ಮೌಲ್ಯದ್ದಾಗಿರಬಹುದು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಮಗು ಐಫೋನ್ 13ಕೊಳ್ಳುವ ಆಸೆ ಇದ್ದರೆ ಯೋಚಿಸಿ ಖರೀದಿ ಮಾಡಿ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...