alex Certify ರೋಡಿಗಿಳಿದಿದೆ ಟಿವಿಎಸ್‌ನ Apache RTR 310, ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ಸಂಪೂರ್ಣ ವಿವರ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಡಿಗಿಳಿದಿದೆ ಟಿವಿಎಸ್‌ನ Apache RTR 310, ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ಸಂಪೂರ್ಣ ವಿವರ……!

ಟಿವಿಎಸ್ ಮೋಟಾರ್ ಕಂಪನಿಯು ಬಹುನಿರೀಕ್ಷಿತ ಅಪಾಚೆ ಆರ್‌ಟಿಆರ್ 310 ನೇಕೆಡ್ ಸ್ಪೋರ್ಟ್ ಬೈಕ್ ರೋಡಿಗಿಳಿದಿದೆ. ಈ ಬೈಕ್‌ನ ಆರಂಭಿಕ ಬೆಲೆ 2.43 ಲಕ್ಷ ರೂಪಾಯಿ. ಹೊಸ ಮೋಟಾರ್‌ಸೈಕಲ್, BMW G310R, KTM 390 ಡ್ಯೂಕ್ ಮತ್ತು ಮುಂಬರುವ ಯಮಹಾ MT-03 ಜೊತೆಗೆ ನೇರವಾಗಿ ಸ್ಪರ್ಧೆಗಿಳಿಯಲಿದೆ.

ಟಿವಿಎಸ್‌ ಅಪಾಚೆ ಆರ್‌ಟಿಆರ್‌ 310 ಮೋಟಾರ್ ಸೈಕಲ್ ಚೂಪಾದ ವಿನ್ಯಾಸವನ್ನು ಹೊಂದಿದೆ. ಇದನ್ನು 3 ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆರ್ಸೆನಲ್ ಬ್ಲಾಕ್ ಫ್ಯೂರಿ ಯೆಲ್ಲೋ ಕಲರ್‌ನಲ್ಲೂ ಈ ಬೈಕ್‌ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ 2.43 ಲಕ್ಷ, 2.58 ಲಕ್ಷ ಮತ್ತು 2.64 ಲಕ್ಷ ರೂಪಾಯಿ. ಬಿಲ್ಟ್ ಟು ಆರ್ಡರ್ ಅನ್ನು 3 ಕಿಟ್‌ಗಳಲ್ಲಿ ನೀಡಲಾಗುತ್ತದೆ. ಡೈನಾಮಿಕ್ ಕಿಟ್, ಡೈನಾಮಿಕ್ ಪ್ರೊ ಕಿಟ್ ಮತ್ತು ಸೆಪಾಂಗ್ ಬ್ಲೂ. ಅವುಗಳ ಬೆಲೆ ಕ್ರಮವಾಗಿ 18,000, 22,000 ಮತ್ತು 10,000 ರೂಪಾಯಿ.

TVS ಅಪಾಚೆ RTR 310 ಫೀಚರ್ಸ್‌…

ಇದು ಹೊಸ ಹಿಂಭಾಗದ ಸಬ್‌ಫ್ರೇಮ್ ಮತ್ತು ಹೊಸ ಸ್ಪ್ಲಿಟ್ ಸೀಟ್ ಸೆಟಪ್‌ನೊಂದಿಗೆ ಹೊಸ ಟ್ರೆಲ್ಲಿಸ್ ಫ್ರೇಮ್ ಅನ್ನು ಆಧರಿಸಿದೆ. ಮೋಟಾರ್‌ಸೈಕಲ್ ಹೊಸ ಶೈಲಿಯ ಮಿಶ್ರಲೋಹದ ಚಕ್ರಗಳನ್ನು ಸಹ ಹೊಂದಿದೆ. TFT ಡಿಸ್‌ಪ್ಲೇ ಇದರ ವಿಶೇಷತೆ. ಅನೇಕ ಕನೆಕ್ಟಿಂಗ್‌ ಫೀಚರ್ಸ್‌ ಕೂಡ ಇದರಲ್ಲಿದೆ.  ಟ್ರೆಪೆಜಾಯಿಡಲ್ ಮಿರರ್‌ ಸಹ ಅಳವಡಿಸಲಾಗಿದೆ.

ಇದು ಸಂಪೂರ್ಣವಾಗಿ ವಿಭಿನ್ನವಾಗಿದೆ. ಹೊಸ Apache RTR 310 ಕ್ರೂಸ್ ಕಂಟ್ರೋಲ್, 5 ರೈಡ್ ಮೋಡ್‌ಗಳು, ಡೈನಾಮಿಕ್ ಹೆಡ್‌ಲ್ಯಾಂಪ್‌ಗಳು, ಕ್ಲೈಮೇಟ್ ಕಂಟ್ರೋಲ್ ಸೀಟ್‌ಗಳು, ಡೈನಾಮಿಕ್ ಟ್ವಿನ್ ಟೈಲ್ ಲ್ಯಾಂಪ್‌ಗಳು, ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್, ರೇಸ್ ಟ್ಯೂನ್ಡ್ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ನಂತಹ ಹಲವಾರು ಫೀಚರ್‌ಗಳು ಈ ಬೈಕ್‌ನಲ್ಲಿವೆ.

ಮೋಟಾರ್‌ಸೈಕಲ್‌ಗೆ ಶಕ್ತಿಯನ್ನು ನೀಡಲು, 312.2cc, ಸಿಂಗಲ್-ಸಿಲಿಂಡರ್, 4-ವಾಲ್ವ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ನೀಡಲಾಗಿದೆ. ಇದು 34PS ಪವರ್ ಮತ್ತು 27.3Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಟಿಗಳಲ್ಲಿ ಹಾಗೂ ಮಳೆಯಲ್ಲಿ ಇದು ಕೊಂಚ ಇಳಿಕೆ ಕಾಣುತ್ತದೆ. 6-ಸ್ಪೀಡ್ ಗೇರ್ ಬಾಕ್ಸ್ ಈ ಬೈಕ್‌ನಲ್ಲಿದೆ. ಇದು ಗಂಟೆಗೆ 150 ಕಿಮೀ ವೇಗವನ್ನು ತಲುಪಬಲ್ಲದು. ಕೇವಲ 2.81 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 60 ಕಿಮೀ ವೇಗವನ್ನು ತಲುಪುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...