alex Certify BREAKING : ಜಮ್ಮು ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ಗೆ ಮತ್ತೋರ್ವ ‘ಯೋಧ’ ಹುತಾತ್ಮ : ಮೃತರ ಸಂಖ್ಯೆ 4 ಕ್ಕೇರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಜಮ್ಮು ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ಗೆ ಮತ್ತೋರ್ವ ‘ಯೋಧ’ ಹುತಾತ್ಮ : ಮೃತರ ಸಂಖ್ಯೆ 4 ಕ್ಕೇರಿಕೆ

ಜಮ್ಮು -ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಮತ್ತೋರ್ವ ಯೋಧ ಹುತಾತ್ಮರಾಗಿದ್ದು, ಮೃತರ ಸಂಖ್ಯೆ 4 ಕ್ಕೇರಿಕೆಯಾಗಿದೆ.

ಜಮ್ಮು –ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 4 ಕ್ಕೇರಿಕೆಯಾಗಿದ್ದು, ಕೋಕರ್ ನಾಗ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.   ಆದರೆ ಇಂದು ಮೃತಪಟ್ಟ ನಾಲ್ಕನೇ ಸೈನಿಕನ ಗುರುತನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಕರ್ನಲ್ ಮನ್ಪ್ರೀತ್ ಸಿಂಗ್ ಮತ್ತು ಮೇಜರ್ ಆಶಿಶ್ ಧೋಂಚಾಕ್ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ಬೆಳಿಗ್ಗೆ ಪಾಣಿಪತ್ನಲ್ಲಿರುವ ಅವರ ನಿವಾಸಗಳಿಗೆ ತರಲಾಯಿತು. ಡೆಪ್ಯೂಟಿ ಸೂಪರಿಂಟೆಂಡೆಂಟ್ ಹುಮಾಯೂನ್ ಭಟ್ ಅವರ ಅಂತ್ಯಕ್ರಿಯೆ ಗುರುವಾರ ಬುಡ್ಗಾಮ್ನಲ್ಲಿರುವ ಅವರ ನಿವಾಸದಲ್ಲಿ ನಡೆಯಿತು. ಎನ್ಕೌಂಟರ್ ನಂತರ ಭಾರತೀಯ ಸೇನೆಯು ಗುರುವಾರ ಶವಗಳನ್ನು ಶ್ರೀನಗರಕ್ಕೆ ವಿಮಾನದಲ್ಲಿ ಸಾಗಿಸಿತ್ತು. ಗುರುವಾರ ಸಂಜೆ ಅವರ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ಕರ್ನಲ್ ಮನ್ ಪ್ರೀತ್ ಸಿಂಗ್ , ಮೇಜರ್ ಆಶಿಶ್ ಧೋಂಚಕ್, ಡಿವೈಎಸ್ಪಿ ಹ್ಯುಮನ್ಯು ರವರು ಹುತಾತ್ಮರಾಗಿದ್ದು, ದೇಶಕ್ಕಾಗಿ ತಮ್ಮ ಪ್ರಾಣ ಒತ್ತೆ ಇಟ್ಟ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ಇದೀಗ ಮತ್ತೋರ್ವ ಯೋಧ ಹುತಾತ್ಮರಾಗಿದ್ದು, ಮೃತರ ಸಂಖ್ಯೆ 4 ಕ್ಕೇರಿಕೆಯಾಗಿದೆ. ಭಯೋತ್ಪಾಕರ ರುಂಡ ಚೆಂಡಾಡಲು ಯೋಧರು ಕಾರ್ಯಾಚರಣೆ ನಡೆಸುತ್ತಿದ್ದು, ಎನ್ ಕೌಂಟರ್ ಮುಂದುವರೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...