alex Certify ‘ಕ್ರಷ್’ ಚಿತ್ರದ ಮತ್ತೊಂದು ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕ್ರಷ್’ ಚಿತ್ರದ ಮತ್ತೊಂದು ಹಾಡು ರಿಲೀಸ್

ಅಭಿ ನಿರ್ದೇಶನದ ‘ಕ್ರಷ್’ ಚಿತ್ರ ತನ್ನ ಹಾಡುಗಳಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತದೆ. ‘ಕಾಯುತ ಒಂದು ನದಿಯು ಇತ್ತು’ ಎಂಬ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಮಾನಸ ವಳ್ಳ ಧ್ವನಿಯಲ್ಲಿ ತುಂಬಾ ಸೊಗಸಾಗಿ  ಮೂಡಿಬಂದಿದೆ. ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜನೆ ನೀಡಿದ್ದು, ನಿರ್ದೇಶಕ ಅಭಿ ಸಾಹಿತ್ಯ ಬರೆದಿದ್ದಾರೆ.

ರೋಮ್ಯಾಂಟಿಕ್ ಲವ್ ಸ್ಟೋರಿ  ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪಂಚಿ, ಪ್ರತಿಭಾ, ಅಭಿನಯ, ಹಾಗೂ ಮಂಜುನಾಥ್ ಹೆಗಡೆ ತೆರೆ ಹಂಚಿಕೊಂಡಿದ್ದು, ಸ್ಮೈಲಿ ಕ್ರಿಯೇಶನ್ ಬ್ಯಾನರ್ ನಲ್ಲಿ ಚಂದ್ರಮೋಹನ್ ಬಂಡವಾಳ ಹೂಡಿದ್ದಾರೆ. ಕ್ರಷ್ ಚಿತ್ರತಂಡ ಈಗಾಗಲೇ ಕೊನೆಯ ಹಂತದ ಶೂಟಿಂಗ್ ನಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...