alex Certify ನಿಶ್ಚಿತಾರ್ಥ ಮಾಡಿಕೊಂಡ ಅನಿಲ್​ ಅಂಬಾನಿ ಹಿರಿಯ ಪುತ್ರ ಅನ್ಮೋಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಶ್ಚಿತಾರ್ಥ ಮಾಡಿಕೊಂಡ ಅನಿಲ್​ ಅಂಬಾನಿ ಹಿರಿಯ ಪುತ್ರ ಅನ್ಮೋಲ್

ಉದ್ಯಮಿ ಅನಿಲ್ ಅಂಬಾನಿ ಹಾಗೂ ಟೀನಾ ಅಂಬಾನಿ ಹಿರಿಯ ಪುತ್ರ ಜೈ ಅನ್ಮೋಲ್​ ಅಂಬಾನಿ ಕೃಷ್ಣಾ ಶಾ ಎಂಬವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೈ ಅನ್ಮೋಲ್​ ಸ್ನೇಹಿತ ಹಾಗೂ ನಟ ಅರ್ಮಾನ್​ ನವಜೋಡಿ ಉಂಗುರ ಬದಲಾಯಿಸಿಕೊಳ್ಳುತ್ತಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅರ್ಮಾನ್​ ಜೈನ್​ ನಟಿ ಕರೀನಾ ಕಪೂರ್​ ಖಾನ್​ರ ಸೋದರ ಸಂಬಂಧಿಯಾಗಿದ್ದಾರೆ. ಹಾಗೂ ಜೈ ಅನ್ಮೋಲ್​​ರ ಉತ್ತಮ ಸ್ನೇಹಿತ ಸಹ ಹೌದು. ಅನ್ಮೋಲ್​ ಜನ್ಮದಿನದಂದು ಈ ಪೋಸ್ಟ್​ ಶೇರ್​ ಮಾಡಿರುವ ಅರ್ಮಾನ್​ , ಅನ್ಮೋಲ್​ ಹಾಗೂ ಕ್ರಿಷಾರಿಗೆ ಶುಭಾಶಯಗಳು ಎಂದು ಶೀರ್ಷಿಕೆ ನೀಡಿದ್ದಾರೆ.

ಇತ್ತ ಅನ್ಮೋಲ್​ ತಾಯಿ ಟೀನಾ ಅಂಬಾನಿ ಕೂಡ ಸೋಶಿಯಲ್​ಮೀಡಿಯಾದಲ್ಲಿ ತಮ್ಮ ಮಗನ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ.

ನೀನು ನಮ್ಮ ಜೀವನಕ್ಕೆ ಹೊಸ ಅರ್ಥವನ್ನು ತಂದಿದ್ದೀಯಾ. ಅತಿಯಾದ ಪ್ರೀತಿಯ ಅರ್ಥವನ್ನು ನಮಗೆ ಕಲಿಸಿದ್ದೀಯಾ. ನಮ್ಮ ಜೀವನವನ್ನು ನೀನು ಪ್ರತಿದಿನ ಬೆಳಗು. ನಿನ್ನನ್ನು ನಾವು ಅತಿಯಾಗಿ ಪ್ರೀತಿಸುತ್ತೇವೆ. ಮುಂಬರುವ ವರ್ಷವೂ ನಿನಗೆ ಉತ್ತಮವಾಗಿರಲಿ. ವೈಯಕ್ತಿಕ ಹಾಗೂ ವೃತ್ತಿಪರ ಜೀವನಗಳೆರಡೂ ಸಂತಸಮಯವಾಗಿ ಇರಲಿ. ನಿನ್ನ ಬಗ್ಗೆ ನಮಗೆ ತುಂಬಾನೇ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...