alex Certify ಅಳಿಯನಿಂದಲೇ ಆಘಾತಕಾರಿ ಕೃತ್ಯ: ಪತ್ನಿ ದೂರವಾಗಿದ್ದಕ್ಕೆ ಅತ್ತೆಯನ್ನೇ ಕೊಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿಯನಿಂದಲೇ ಆಘಾತಕಾರಿ ಕೃತ್ಯ: ಪತ್ನಿ ದೂರವಾಗಿದ್ದಕ್ಕೆ ಅತ್ತೆಯನ್ನೇ ಕೊಂದ

ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಶನಿವಾರ 55 ವರ್ಷದ ಮಹಿಳೆಯನ್ನು ಅಳಿಯನೇ ಕೊಲೆ ಮಾಡಿದ್ದಾನೆ. 32 ವರ್ಷದ ಆರೋಪಿ ಬಾಲದುರಯ್ಯ ತನ್ನ ಪತ್ನಿ ರಮಾದೇವಿ ದೂರವಾಗಿದ್ದಕ್ಕೆ ಚಾಕುವಿನಿಂದ ಇರಿದು ಅತ್ತೆಯನ್ನು ಕೊಂದಿದ್ದಾನೆ.

ಮೃತರನ್ನು ಎಂ. ಓಬುಳಮ್ಮ ಎಂದು ಗುರುತಿಸಲಾಗಿದೆ. ಬಾಲದುರಯ್ಯ ಕಿರುಕುಳ ನೀಡುತ್ತಿದ್ದ ಕಾರಣ ರಮಾದೇವಿ ನಾಲ್ಕು ತಿಂಗಳ ಹಿಂದೆ ತನ್ನ ತಾಯಿಯ ಮನೆಗೆ ಹೋಗಿದ್ದಳು. ಈ ಕಾರಣದಿಂದ ಆರೋಪಿ ಅತ್ತೆಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ಘಟನೆ ನಡೆದ ದಿನ ಬಾಲದುರಯ್ಯ ಓಬುಳಮ್ಮ ಅವರ ಮನೆಗೆ ಹೋಗಿ ಅತ್ತೆ ಮತ್ತು ಪತ್ನಿಯೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾನೆ.

ಜಗಳದ ವೇಳೆ ಚಾಕು ತೆಗೆದುಕೊಂಡು ತನ್ನ ಅತ್ತೆಯ ಹೊಟ್ಟೆಗೆ ಇರಿದಿದ್ದಾನೆ. ಓಬುಳಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...