alex Certify ಡ್ರೀಮ್ ವರ್ಕ್ ಜೊತೆ ಟೀಮ್ ವರ್ಕ್ ಹೇಗೆ…? ಆನಂದ್ ಮಹೀಂದ್ರಾ ಪೋಸ್ಟ್‌ನಲ್ಲಿದೆ ಈ ಗುಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೀಮ್ ವರ್ಕ್ ಜೊತೆ ಟೀಮ್ ವರ್ಕ್ ಹೇಗೆ…? ಆನಂದ್ ಮಹೀಂದ್ರಾ ಪೋಸ್ಟ್‌ನಲ್ಲಿದೆ ಈ ಗುಟ್ಟು

ಉದ್ಯಮಿ ಆನಂದ್ ಮಹೀಂದ್ರಾ ಅವರು ಆಗಿಂದಾಗ್ಗೆ ಸಮಾಜಕ್ಕೆ ಸ್ಪೂರ್ತಿತುಂಬುವ ಪೋಸ್ಟ್‌ಗಳನ್ನು ಜಾಲತಾಣದಲ್ಲಿ ಪ್ರಕಟಿಸಿ ಗಮನ ಸೆಳೆಯುತ್ತಾರೆ.

ಇದೀಗ ಹೊಸ ಪೋಸ್ಟ್ ಮಾಡಿದ್ದು, ಡ್ರೀಮ್ ವರ್ಕ್ ಜೊತೆ ಟೀಮ್ ವರ್ಕ್ ಹೇಗೆ ಎಂಬುದನ್ನು ತೋರಿಸುವಂತಿದೆ.

ಎರಡು ಕಾಗೆಗಳು ಬೆಕ್ಕನ್ನು ಮೂರ್ಖನನ್ನಾಗಿಸುವ ಮತ್ತು ತಿನ್ನುವುದರಲ್ಲಿ ಮಗ್ನವಾಗಿದ್ದ ಆಹಾರದ ತುಂಡನ್ನು ಕದಿಯಲು ಎರಡು ಕಾಗೆಗಳು ಸೇರಿಕೊಂಡು ಮಾಡಿದ ತಂತ್ರದ ಹಳೆಯ ವಿಡಿಯೋವನ್ನು ಮಹೀಂದ್ರಾ ಹಂಚಿಕೊಂಡಿದ್ದಾರೆ.

ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದ ತಾಯಿಯನ್ನು ಸ್ನೇಹಿತರ ಜೊತೆ ಸೇರಿ ಹತ್ಯೆಗೈದ ಪುತ್ರಿ

ಮೊದಲ ಕಾಗೆ ಬೆಕ್ಕನ್ನು ಚುಚ್ಚುತ್ತದೆ ಇದರಿಂದ ಅದು ವಿಚಲಿತವಾಗುತ್ತದೆ. ಏತನ್ಮಧ್ಯೆ, ಎರಡನೆ ಕಾಗೆಯು ಬೆಕ್ಕಿಗೆ ಆಶ್ಚರ್ಯವನ್ನುಂಟುಮಾಡಿ ಅಲ್ಲಿದ್ದ ಆಹಾರದ ತುಣುಕನ್ನು ತೆಗೆದುಕೊಂಡು ಹೋಗಲು ಧಾವಿಸುತ್ತದೆ.

ಈ ರೀತಿ ಕೆಲಸ ಮಾಡುವ ತಂಡವು ಜನರು ತಮ್ಮ ಗುರಿಗಳನ್ನು ಹೆಚ್ಚು ವೇಗವಾಗಿ ಸಾಧಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಮಹೀಂದ್ರಾ ತಿಳಿಸಿದ್ದಾರೆ.

ನೀವು ತಂಡದೊಂದಿಗೆ ಸಹಯೋಗದಲ್ಲಿ ಕೆಲಸ ಮಾಡಿದರೆ ನೀವು ಯಾವಾಗಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತೀರಿ ಎಂಬುದನ್ನು ನೆನಪಿಡಿ ಎಂದು ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋವನ್ನು 5 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ ಮತ್ತು ನೂರಾರು ಮಂದಿ ವಿವಿಧ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...