alex Certify ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದ ತಾಯಿಯನ್ನು ಸ್ನೇಹಿತರ ಜೊತೆ ಸೇರಿ ಹತ್ಯೆಗೈದ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದ ತಾಯಿಯನ್ನು ಸ್ನೇಹಿತರ ಜೊತೆ ಸೇರಿ ಹತ್ಯೆಗೈದ ಪುತ್ರಿ

ಮೂವರು ಸ್ನೇಹಿತರ ಸಹಾಯದಿಂದ ತಾಯಿಯನ್ನು ಕತ್ತು ಹಿಸುಕಿ ಕೊಂದಿದ್ದ ಆರೋಪದ ಅಡಿಯಲ್ಲಿ ಪೊಲೀಸರು 17 ವರ್ಷದ ಮಗಳು ಸೇರಿದಂತೆ ಇಬ್ಬರನ್ನು ಬಂಧಿಸಿದ ಘಟನೆಯು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಸಂಭವಿಸಿದೆ.

ಮಾರ್ಚ್ 26ರರಂದು ತಾಯಿಯನ್ನು ಕೊಲೆಗೈಯಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ತಾಯಿಯು ತನ್ನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಮಗಳು ತಾಯಿಯನ್ನು ಕೊಲೆಗೈದಿದ್ದಾಳೆ. ಮೂವರು ಪುರುಷ ಸ್ನೇಹಿತರು ಯುವತಿಗೆ ಸಾಥ್​ ನೀಡಿದ್ದಾರೆ.

ತೂತುಕುಡಿ ನಿವಾಸಿಯಾಗಿದ್ದ ಮುನಿಯಲಕ್ಷ್ಮೀ ಪತಿಯೊಂದಿಗೆ ಬೇರ್ಪಟ್ಟ ಬಳಿಕ ಕಳೆದೊಂದು ವರ್ಷಗಳಿಂದ ಮೂವರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದರು. ಮುನಿಯಲಕ್ಷ್ಮೀ ಮನೆ ಕೆಲಸ ಮಾಡುತ್ತಿದ್ದರೆ, ಮಗಳು ಡಿಪ್ಲೋಮಾ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿದ್ದಳು. ತಾಯಿ – ಮಗಳ ನಡುವೆ ಆಗಾಗ ಮನಸ್ತಾಪವುಂಟಾಗುತ್ತಿತ್ತು ಎನ್ನಲಾಗಿದೆ.

ಶನಿವಾರ ರಾತ್ರಿ ಪೊಲೀಸರಿಗೆ ಕರೆ ಮಾಡಿದ ಮಗಳು ನನ್ನ ತಾಯಿಯನ್ನು ಅಪರಿಚಿತರು ಕೊಂದಿದ್ದಾರೆ ಎಂದು ಹೇಳಿದ್ದಾಳೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ತನಿಖೆ ನಡೆಯುತ್ತಿದ್ದ ವೇಳೆಯಲ್ಲಿ ಮೊದಲು ಯುವತಿ ತಾನು ಈ ಕೊಲೆಯಲ್ಲಿ ಭಾಗಿಯಾಗಿಲ್ಲ ಎಂದೇ ವಾದಿಸಿದ್ದಾಳೆ. ಆದರೆ ಸಾಕಷ್ಟು ತನಿಖೆ ಬಳಿಕ ಯುವತಿಯು ತಾಯಿ ನನ್ನನ್ನ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಾಳೆ ಎಂಬುದು ನನ್ನ ಗಮನಕ್ಕೆ ಬಂದ ಬಳಿಕ ಈ ಕೃತ್ಯ ಎಸಗಿದೆ ಎಂದು ಒಪ್ಪಿಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...