alex Certify ವಿಚಿತ್ರ ವಿನ್ಯಾಸದ ತ್ರಿಚಕ್ರ ವಾಹನ ವಿಡಿಯೋ ಹಂಚಿಕೊಂಡ ಆನಂದ್​ ಮಹೀಂದ್ರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ವಿನ್ಯಾಸದ ತ್ರಿಚಕ್ರ ವಾಹನ ವಿಡಿಯೋ ಹಂಚಿಕೊಂಡ ಆನಂದ್​ ಮಹೀಂದ್ರಾ….!

ಮಹೀಂದ್ರಾ ಗ್ರೂಪ್ ಚೇರ್​ಮನ್​ ಆನಂದ್​ ಮಹೀಂದ್ರಾ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಇರ್ತಾರೆ. ಇತ್ತೀಚೆಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ವಿಚಿತ್ರವಾದ ವಾಹನವೊಂದರ ವಿಡಿಯೋ ಶೇರ್​ ಮಾಡಿದ್ದು ಅನೇಕರ ಕುತೂಹಲಕ್ಕೆ ಕಾರಣರಾಗಿದ್ದಾರೆ.

ನ್ಯೂಯಾರ್ಕ್​ ನಗರದಲ್ಲಿ ಚಿತ್ರೀಕರಿಸಲಾದ ವಿಡಿಯೋ ಇದಾಗಿದ್ದು, ಈ ವಿಡಿಯೋದಲ್ಲಿ ಮೂರು ಚಕ್ರದ ವಿಚಿತ್ರ ವಾಹನವೊಂದನ್ನು ಕಾಣಬಹುದಾಗಿದೆ. ಭಾರತದಲ್ಲಿರುವ ಆಟೋರಿಕ್ಷಾದಂತೆಯೇ ಈ ವಾಹನ ಕಾಣುತ್ತಿದೆ ಆದರೆ ಈ ವಾಹನದ ರೂಪಾಂತರ ಅತ್ಯಂತ ಸೊಗಸಾಗಿದೆ.

ಸೋಶಿಯಲ್​ ಮೀಡಿಯಾ ಪೋಸ್ಟ್​​ನಲ್ಲಿ ಆನಂದ್​ ಮಹೀಂದ್ರಾ ತ್ರಿಚಕ್ರ ವಾಹನದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ವಾಹನಗಳು ಮುಂದಿನ ದಿನದಲ್ಲಿ ಭಾರತದಲ್ಲಿರುವ ಆಟೋ ಜಾಗವನ್ನು ತುಂಬಲಿದೆ ಎಂದು ಆನಂದ್​ ಮಹೀಂದ್ರಾ ಅಭಿಪ್ರಾಯಪಟ್ಟಿದ್ದಾರೆ.

ಮ್ಯಾನ್​ಹ್ಯಾಟನ್​​ನಲ್ಲಿ ಈ ತ್ರಿಚಕ್ರ ವಾಹನವನ್ನು ನೋಡಿದ್ದೇನೆ. ಅಂದಹಾಗೆ ಇದು ವಾಣಿಜ್ಯ ಬಳಕೆಗೆ ಉಪಯೋಗಿಸಲ್ಪಡುವ ರಿಕ್ಷಾವಲ್ಲ. ಆದರೆ ಇದರ ವಿನ್ಯಾಸ ನೋಡುತ್ತಿದ್ದರೆ ಒಂದು ದಿನ ಭಾರತೀಯ ಕಂಪನಿಗಳು ರಿಕ್ಷಾದ ಬದಲಾಗಿ ಈ ವಿನ್ಯಾಸದ ತ್ರಿಚಕ್ರ ವಾಹನವನ್ನೇ ವಿನ್ಯಾಸಗೊಳಿಸಿದರೆ ಆಶ್ಚರ್ಯವಿಲ್ಲ ಅಂತಾ ಅಭಿಪ್ರಾಯ ಹೊರಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...