alex Certify Watch: ಈ ರೀತಿಯ ಕಿಟಕಿ ವಿನ್ಯಾಸವನ್ನು ನೀವು ಹಿಂದೆಂದೂ ನೋಡಿರೋಕೆ ಸಾಧ್ಯವೇ ಇಲ್ಲ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch: ಈ ರೀತಿಯ ಕಿಟಕಿ ವಿನ್ಯಾಸವನ್ನು ನೀವು ಹಿಂದೆಂದೂ ನೋಡಿರೋಕೆ ಸಾಧ್ಯವೇ ಇಲ್ಲ..!

ಮಹೀಂದ್ರಾ ಗ್ರೂಪ್​​ನ ಅಧ್ಯಕ್ಷರಾದ ಆನಂದ್​ ಮಹೀಂದ್ರಾ ಸೋಶಿಯಲ್​ ಮೀಡಿಯಾ ವೇದಿಕೆಯಲ್ಲಿ ಸದಾ ಸಕ್ರಿಯವಾಗಿ ಇರ್ತಾರೆ. ಇಲ್ಲಿ ಅವರು ವೈರಲ್​ ಆಗುವಂತಹ ವಿಡಿಯೋಗಳನ್ನು ಅತ್ಯುತ್ತಮ ಶೀರ್ಷಿಕೆಯೊಂದಿಗೆ ಪೋಸ್ಟ್​ ಮಾಡ್ತಾರೆ.

ಈ ಬಾರಿ ಕೂಡ ಆನಂದ್​ ಮಹೀಂದ್ರಾ ಅಂತದ್ದೇ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ. ಗಾಜಿನಿಂದ ಮಾಡಿದ ಕಿಟಕಿಯು ಬಾಲ್ಕನಿಯಾಗಿ ಪರಿವರ್ತನೆಗೊಳ್ಳುವ ವಿಡಿಯೋ ವೈರಲ್​ ಆಗಿದೆ.

ಆನಂದ್​ ಮಹೀಂದ್ರಾ ಶೇರ್​ ಮಾಡಿರುವ ಈ ವಿಡಿಯೋದಲ್ಲಿ ಕಡಿಮೆ ಜಾಗದಲ್ಲಿ ಹೇಗೆ ಬಾಲ್ಕನಿ ನಿರ್ಮಾಣ ಮಾಡಬಹುದು ಎಂಬುದನ್ನು ನೋಡಬಹುದಾಗಿದೆ. ಕಟ್ಟಡ ನಿರ್ಮಾಣದ ಉದ್ಯಮದಲ್ಲಿ ದಿನಕ್ಕೊಂದು ರೀತಿಯ ನಾವಿನ್ಯತೆಯನ್ನು ಕಾಣಬಹುದಾಗಿದೆ. ನೀವು ಕಟ್ಟಡಗಳನ್ನು ನಿರ್ಮಾಣ ಮಾಡಬೇಕು ಎಂದುಕೊಂಡಿದ್ದಾರೆ ಈ ಉಪಾಯವನ್ನು ಟ್ರೈ ಮಾಡಿ ನೋಡಬಹುದು ಎಂದು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಇಂಜಿನಿಯರ್​ ಬುದ್ಧಿಗೆ ಭಲೆ ಎಂದಿದ್ದಾರೆ. ಓರ್ವ ನೆಟ್ಟಿಗರಂತೂ ಚಾ – ಪಕೋಡಾದೊಂದಿಗೆ ಮಳೆಯನ್ನು ಆನಂದಿಸಲು ಇದು ಉತ್ತಮವಾದ ಐಡಿಯಾ ಎಂದು ಹೇಳಿದ್ದಾರೆ. ಇನ್ನೊಬ್ಬರು ಈಗಾಗಲೇ ಕಟ್ಟಡ ನಿರ್ಮಾಣದಲ್ಲಿ ಈ ಪ್ಲಾನ್​ ಬಳಕೆಯಾಗುತ್ತಿದೆ ಎಂದು ಹೇಳಿದ್ದಾರೆ. ಈ ರೀತಿಯ ಮೊದಲ ಮಾದರಿಯನ್ನು ನೆದರ್​ಲ್ಯಾಂಡ್ಸ್​​ನ ಆಮ್​ಸ್ಟರ್​ಡ್ಯಾಂನಲ್ಲಿರುವ ಅಪಾರ್ಟ್​ಮೆಂಟ್​​ ಕಟ್ಟಡದಲ್ಲಿ ಸ್ಥಾಪಿಸಲಾಗಿದೆ ಎಂದು ಇನ್ನೊಬ್ಬರು ಟ್ವೀಟಾಯಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...