alex Certify ನುಡಿದಂತೆ ನಡೆದ ಆನಂದ್ ಮಹೀಂದ್ರಾ, ಮಹಾರಾಷ್ಟ್ರದ ವ್ಯಕ್ತಿಗೆ ಬೊಲೆರೊ ಗಿಫ್ಟ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನುಡಿದಂತೆ ನಡೆದ ಆನಂದ್ ಮಹೀಂದ್ರಾ, ಮಹಾರಾಷ್ಟ್ರದ ವ್ಯಕ್ತಿಗೆ ಬೊಲೆರೊ ಗಿಫ್ಟ್….!

Anand Mahindra gives brand-new Bolero to Maharashtra man in exchange for his innovative 4-wheeler. See pics - Trending News Newsಆನಂದ್ ಮಹೀಂದ್ರಾ ಅವರು ಸ್ಕ್ರ್ಯಾಪ್ ಮೆಟಲ್ ಬಳಸಿ ನಾಲ್ಕು ಚಕ್ರದ ವಾಹನವನ್ನು ನಿರ್ಮಿಸುವಲ್ಲಿ ಯಶಸ್ವಿಯಾದ ಮಹಾರಾಷ್ಟ್ರದ ವ್ಯಕ್ತಿಯ ಬಗ್ಗೆ ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಟ್ವೀಟ್ ನೆನಪಿರಬೇಕಲ್ಲವೆ. ಆ ವ್ಯಕ್ತಿ ನಿರ್ಮಿಸಿದ ಕಾರ್ ಬಗೆಗಿನ ವಿಡಿಯೋ ಹಂಚಿಕೊಡು ಅವರ ಆವಿಷ್ಕಾರದ ಬದಲು ಹೊಚ್ಚಹೊಸ ಬೊಲೆರೊ ನೀಡುವುದಾಗಿ ಭರವಸೆ ನೀಡಿದ್ದ ಆನಂದ್ ಮಹೀಂದ್ರಾ ಅವರು ನುಡಿದಂತೆ ನಡೆದಿದ್ದಾರೆ.

ಸ್ಕ್ರಾಪ್ ನಿಂದ ಕಾರ್ ತಯಾರಿಸಿದ್ದ ದತ್ತಾತ್ರೇಯ ಅವ್ರನ್ನ ತಮ್ಮ ಶೋರೂಂಗೆ ಆಹ್ವಾನಿಸಿ ಹೊಚ್ಚ ಹೊಸ ಬೊಲೆರೊ ಉಡುಗೊರೆ ನೀಡಿರುವ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದತ್ತಾತ್ರೇಯ ಅವ್ರ ಕುಟುಂಬ ಕಾರು ಸ್ವೀಕರಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಅವರು ಧನ್ಯವಾದ ತಿಳಿಸಿದ್ದಾರೆ. ದತ್ತಾತ್ರೇಯ ಅವ್ರು ತಮ್ಮ ವಿಭಿನ್ನ ಆವಿಷ್ಕಾರದ ಬದಲಿಗೆ ನಮ್ಮ ಕಾರನ್ನು ವಿನಿಮಯ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಕ್ಕೆ ಖುಷಿಯಾಯಿತು. ಅವರ ಕುಟುಂಬವು ಬೊಲೆರೊವನ್ನು ಸ್ವೀಕರಿಸಿದೆ. ನಾವು ಅವರು ತಯಾರಿಸಿರುವ ವಾಹನದ ಜವಾಬ್ದಾರಿಯನ್ನು ಹೆಮ್ಮೆಯಿಂದ ವಹಿಸಿಕೊಂಡಿದ್ದೇವೆ. ಇದು ನಮ್ಮ ರಿಸರ್ಚ್ ವ್ಯಾಲಿಯಲ್ಲಿನ ಎಲ್ಲಾ ರೀತಿಯ ಕಾರುಗಳ ಸಂಗ್ರಹದ ಭಾಗವಾಗಿರುತ್ತದೆ ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ದತ್ತಾತ್ರೇಯ ಅವರು ತಮ್ಮ ಮಗನ ಆಸೆಯನ್ನು ಪೂರೈಸಲು ಸ್ಕ್ರಾಪ್ ಮೆಟಲ್ ಬಳಸಿ 60ಸಾವಿರ ವೆಚ್ಚದಲ್ಲಿ ವಾಹನವನ್ನು ನಿರ್ಮಿಸಿದ್ದರು. ಇದರಿಂದ ಇಂಪ್ರೆಸ್ ಆದ ಮಹೀಂದ್ರಾ ಅವರು ಅವರಿಗೆ ಈ ಅದ್ಭುತ ಉಡುಗೊರೆ ನೀಡಿದ್ದಾರೆ.‌

— anand mahindra (@anandmahindra) January 25, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...