alex Certify 4 ಗಂಟೆ ಫುಲ್ ಚಾರ್ಜ್ ಮಾಡಿ, 120 ಕಿಲೋಮೀಟರ್ ಆರಾಮಾಗಿ ಚಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ಗಂಟೆ ಫುಲ್ ಚಾರ್ಜ್ ಮಾಡಿ, 120 ಕಿಲೋಮೀಟರ್ ಆರಾಮಾಗಿ ಚಲಿಸಿ

ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ ಗಳಿಗೆ ಬೇಡಿಕೆ ತುಂಬಾ ಹೆಚ್ಚಾಗ್ತಿದೆ. ಅನೇಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ಮಾಡ್ತಿವೆ. ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಎಮೋ ಎಲೆಕ್ಟ್ರಿಕ್ ಬೈಕ್  ಹೊಸ ಎಲೆಕ್ಟ್ರಿಕ್ ಸ್ಕೂಟರ್  ಜಾಂಟಿ ಪ್ಲಸ್ ಬಿಡುಗಡೆ ಮಾಡಿದೆ.

ಎಮೋ ಎಲೆಕ್ಟ್ರಿಕ್ ಬೈಕ್ ನ ಜಾಂಟಿ ಪ್ಲಸ್  ಇ-ಸ್ಕೂಟರ್ ಬೆಲೆ 1,10,460 ರೂಪಾಯಿಯಿಂದ ಆರಂಭವಾಗುತ್ತದೆ. ಗ್ರಾಹಕರಿಗೆ ಮೂರು ವರ್ಷಗಳ ವಾರಂಟಿ ಸಿಗಲಿದೆ. ಇದು ಐದು ಬಣ್ಣಗಳಲ್ಲಿ ಲಭ್ಯವಿದೆ. ಕೆಂಪು-ಕಪ್ಪು, ಬೂದು-ಕಪ್ಪು, ನೀಲಿ-ಕಪ್ಪು, ಬಿಳಿ-ಕಪ್ಪು ಮತ್ತು ಹಳದಿ-ಕಪ್ಪು ಬಣ್ಣದಲ್ಲಿ ಲಭ್ಯವಿದೆ.

ಜಾಂಟಿ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಸರಾಸರಿ ವೇಗ 120 ಕಿಲೋಮೀಟರ್. ಶೇಕಡಾ 100ರಷ್ಟು ಚಾರ್ಜ್ ಮಾಡಲು 4 ಗಂಟೆ ಬೇಕಾಗುತ್ತದೆ. 60V/40Ah ಸುಧಾರಿತ ಲಿಥಿಯಂ ಬ್ಯಾಟರಿಯನ್ನು ಇದಕ್ಕೆ ನೀಡಲಾಗಿದೆ. ಕ್ರೂಸ್ ಕಂಟ್ರೋಲ್ ಸ್ವಿಚ್, ಎಲೆಕ್ಟ್ರಾನಿಕ್ ಅಸಿಸ್ಟೆಡ್ ಬ್ರೇಕಿಂಗ್ ಸಿಸ್ಟಮ್ ಆಂಟಿ-ಥೆಫ್ಟ್ ಅಲಾರ್ಮ್ ಇದಕ್ಕೆ ನೀಡಲಾಗಿದೆ.

ಜಾಂಟಿ ಪ್ಲಸ್ ಮೊಬೈಲ್ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಲಭ್ಯವಿದೆ. ಎಮೋ ಎಲೆಕ್ಟ್ರಿಕಲ್ ಬೈಕ್ ಕಂಪನಿ, ಕೈಗೆಟುಕುವ ಇ-ಮೊಬಿಲಿಟಿ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ ಎನ್ನಬಹುದು. ಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್, ಹೈ ಗ್ರೌಂಡ್ ಕ್ಲಿಯರೆನ್ಸ್, ಸೈಡ್ ಸ್ಟ್ಯಾಂಡ್ ಸೆನ್ಸರ್‌ಗಳು, ಸೆಂಟ್ರಲ್ ಲಾಕಿಂಗ್, ಫ್ರಂಟ್ ಡಿಸ್ಕ್ ಬ್ರೇಕ್, ಡಿಆರ್‌ಎಲ್ ಲೈಟ್‌ಗಳು ಮತ್ತು ಎಂಜಿನ್ ಕಿಲ್ ಸ್ವಿಚ್ ಇತರ ವೈಶಿಷ್ಟ್ಯಗಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...