alex Certify ಒಮಿಕ್ರಾನ್ ಭೀತಿ, ಮುಂಬೈನಲ್ಲಿ ಹೆಚ್ಚಾಯ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ಭೀತಿ, ಮುಂಬೈನಲ್ಲಿ ಹೆಚ್ಚಾಯ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ

ಮುಂಬೈನಲ್ಲಿ ಹೆಚ್ಚುತ್ತಿರುವ ಕೋವಿಡ್ ಮತ್ತು ಒಮಿಕ್ರಾನ್ ಪ್ರಕರಣಗಳು ನಿಯಂತ್ರಣವಿಲ್ಲದೆ ಓಡುತ್ತಿವೆ. ಇಂಥಾ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಮೀಸಲಾಗಿರುವ ಒಟ್ಟು ಹಾಸಿಗೆಗಳಲ್ಲಿ ಸುಮಾರು 60 ಪ್ರತಿಶತದಷ್ಟು ಹಾಸಿಗೆಗಳು ಭರ್ತಿಯಾಗಿವೆ‌. ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್(BMC) ವ್ಯಾಪ್ತಿಯಲ್ಲಿ ಕೊರೋನಾ‌ ಸೋಂಕಿತರ ಹಾಸ್ಪಿಟಲೈಸೇಷನ್ ಕಡಿಮೆ ಎಂದು ಹೇಳಲಾಗ್ತಿದ್ರು, BMC ನಿಯಂತ್ರಿತ ಆಸ್ಪತ್ರೆಗಳಿಗೆ ದಾಖಲಾತಿ ಪ್ರಮಾಣ ಸೀಮಿತವಾಗಿದ್ದರೂ ಸಹ ಈ ಬೆಳವಣಿಗೆ ಕಂಡುಬಂದಿದೆ‌.

ಬಾಂಬೆ ಆಸ್ಪತ್ರೆಯಲ್ಲಿ, ಕೋವಿಡ್ ರೋಗಿಗಳಿಗೆ ಕಾಯ್ದಿರಿಸಿದ ಎಲ್ಲಾ 102 ಹಾಸಿಗೆಗಳು ಜನವರಿ 7 ರಂದು ಭರ್ತಿಯಾಗಿವೆ, ಎಂದು ಖಾಸಗಿ ಆಸ್ಪತ್ರೆಗಳ ಸಂಯೋಜಕರಾದ ಡಾ ಗೌತಮ್ ಬನ್ಸಾಲಿ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಯುಪೆನ್ಸಿ ಹೆಚ್ಚಾಗಿದೆ ಎಂಬ ಅಂಶವನ್ನು ಬನ್ಸಾಲಿ ಒಪ್ಪಿಕೊಂಡಿದ್ದಾರೆ. ನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದಂತೆ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ, ನಾವು ಕೊರೋನಾ ರೋಗಿಗಳಿಗಾಗಿ ಮೀಸಲಿಡುವ ಹಾಸಿಗೆಗಳನ್ನ ಹೆಚ್ಚಿಸಲು ಚಿಂತನೆ ನಡೆಸಿದ್ದೇವೆ ಎಂದು ಡಾ ಬನ್ಸಾಲಿ ಮಾಹಿತಿ ನೀಡಿದ್ದಾರೆ.

ಮುಂಬೈನಲ್ಲಿ ಒಟ್ಟು 142 ಖಾಸಗಿ ಕೋವಿಡ್ ಆಸ್ಪತ್ರೆಗಳಿವೆ. ಈ ಆಸ್ಪತ್ರೆಗಳಲ್ಲಿ ಸುಮಾರು 7,500 ಹಾಸಿಗೆಗಳನ್ನ ಕೊರೋನಾ ರೋಗಿಗಳಿಗೆ ಮೀಸಲಿಡಲಾಗಿದೆ. ಇದರಲ್ಲಿ, ಜನವರಿ 7 ರ ಹೊತ್ತಿಗೆ, ಸುಮಾರು 4,500 ಜನರು ಆಕ್ರಮಿಸಿಕೊಂಡಿದ್ದಾರೆ. ನಿಯಮದಂತೆ, ಖಾಸಗಿ ಆಸ್ಪತ್ರೆಗಳು ಲಕ್ಷಣರಹಿತ ರೋಗಿಗಳನ್ನು ಸ್ವೀಕರಿಸುತ್ತಿಲ್ಲ, ಲಕ್ಷಣಗಳಿಲ್ಲದ ರೋಗಿಗಳನ್ನು ನಿಯಮದ ಪ್ರಕಾರ ಮನೆಯಲ್ಲಿ ಪ್ರತ್ಯೇಕಿಸಲು ಕೇಳಲಾಗಿದೆ. ಸೌಮ್ಯ ರೋಗಲಕ್ಷಣಗಳೊಂದಿಗೆ, ಅಸ್ವಸ್ಥರಾಗಿರುವವರನ್ನ ದಾಖಲಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ, ಕೋವಿಡ್ ಹಾಸಿಗೆಗಳ ಸಂಖ್ಯೆಯನ್ನು ಸುಮಾರು 14,000 ಕ್ಕೆ ಹೆಚ್ಚಿಸಲಾಗುವುದು. ಸರ್ಕಾರಿ ಸೌಲಭ್ಯಗಳೊಂದಿಗೆ ಮುಂಬೈನಲ್ಲಿ ಕನಿಷ್ಠ 45,000 ಆಮ್ಲಜನಕಯುಕ್ತ ಹಾಸಿಗೆಗಳು ಇರುತ್ತವೆ. ಪ್ರಕರಣಗಳು ಲಕ್ಷಕ್ಕೆ ಏರಿದರೂ ಮುಂಬೈಗೆ ಸನ್ನದ್ಧವಾಗಿದೆ ಎಂದು ಡಾ.ಬನ್ಸಾಲಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...