alex Certify ಅಂಬೇಡ್ಕರ್ ನಿಂದಿಸಿ ವಿಡಿಯೋ ಹರಿಬಿಟ್ಟ ಯುವತಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಬೇಡ್ಕರ್ ನಿಂದಿಸಿ ವಿಡಿಯೋ ಹರಿಬಿಟ್ಟ ಯುವತಿ ಅರೆಸ್ಟ್

ತುಮಕೂರು: ಸಂವಿಧಾನ ಶೆಲ್ಫಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ನಿಂದನೆಯ ವಿಡಿಯೋ ಬಂಧಿಸಿದ್ದಾರೆ. ತುಮಕೂರು ತಾಲೂಕಿನ ಕಲ್ಲಹಳ್ಳಿ ನಿವಾಸಿಯಾಗಿರುವ 22 ವರ್ಷದ ವೇದಾವತಿ ಬಂಧಿತ ಯುವತಿ.

ಗ್ರಾಮದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕನನ್ನು ವೇದಾವತಿ ಪ್ರೀತಿಸಿದ್ದು, ಆತ ಕೈಕೊಟ್ಟಿದ್ದರಿಂದ ತುಮಕೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಆಕೆಯ ಆರೋಪಕ್ಕೆ ಸೂಕ್ತ ದಾಖಲೆ, ಸಾಕ್ಷ್ಯ ಸಲ್ಲಿಸುವಂತೆ ತಿಳಿಸಲಾಗಿತ್ತು. ಇದರಿಂದ ಬೇಸತ್ತ ವೇದಾವತಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಅಪ್ಲೋಡ್ ಮಾಡಿದ್ದಳು. ಇದನ್ನು ನೋಡಿದ ಶ್ರೀನಿವಾಸ್ ಎಂಬಾತ ಹೊಸ ಬಡಾವಣೆ ಠಾಣೆಗೆ ದೂರು ನೀಡಿದ್ದು, ಆಕೆಯನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...