alex Certify ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅಮೆಜಾನ್​ ಇಂಡಿಯಾದಿಂದ ‘ಬಂಪರ್’ ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅಮೆಜಾನ್​ ಇಂಡಿಯಾದಿಂದ ‘ಬಂಪರ್’ ಕೊಡುಗೆ

ಇ ಕಾಮರ್ಸ್​ ದೈತ್ಯ ಅಮೆಜಾನ್​ ಇಂಡಿಯಾ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ 20 ಸಾವಿರ ಡಿಜಿಟಲ್​​ ಸಾಧನಗಳನ್ನು ಉಚಿತವಾಗಿ ಒದಗಿಸುವುದಾಗಿ ಹೇಳಿಕೆ ನೀಡಿದೆ.

‘ಡೆಲಿವರಿಂಗ್​ ಸ್ಮೈಲ್​’ (ನಗುವಿನ ವಿತರಣೆ) ಎಂಬ ಕಾರ್ಯಕ್ರಮದ ಅಡಿಯಲ್ಲಿ 150ಕ್ಕೂ ಅಧಿಕ ದೊಡ್ಡ ಹಾಗೂ ಸಣ್ಣ ಲಾಭರಹಿತ ಸಂಸ್ಥೆಗಳ ಸಹಭಾಗಿತ್ವದಲ್ಲಿ ದೇಶಾದ್ಯಂತ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೆರವಾಗಲು ಅಮೆಜಾನ್​ ಇಂಡಿಯಾ ಮುಂದಾಗಿದೆ.

ʼನವರಾತ್ರಿʼಯಲ್ಲಿ ಉಪವಾಸ ವೃತ ದೋಷವಾದ್ರೆ ಏನು ಮಾಡ್ಬೇಕು…..?

ಹಿಂದುಳಿದ ಮಕ್ಕಳ ಕಲ್ಯಾಣಕ್ಕಾಗಿ ಅಮೆಜಾನ್​​ ಕಂಪನಿಯು 20 ಸಾವಿರ ಡಿಜಿಟಲ್​ ಸಾಧನಗಳನ್ನು ನೇರವಾಗಿ ಮಕ್ಕಳಿಗೆ ವಿತರಣೆ ಮಾಡಲಿದೆ.

ಇದಕ್ಕಾಗಿ 150 ಸಣ್ಣ ಹಾಗೂ ದೊಡ್ಡ ಲಾಭರಹಿತ ಸಂಸ್ಥೆಗಳು ಸಹಯೋಗವನ್ನು ನೀಡಿದ್ದು ಒಟ್ಟು 1 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಲು ಉದ್ದೇಶಿಸಿದ್ದೇವೆ. ಈ 150 ಸಂಸ್ಥೆಗಳಲ್ಲಿ 100 ಲಾಭರಹಿತ ಪಾಲುದಾರರನ್ನು ಅಮೆಜಾನ್​​ನ ಈ ಕಾರ್ಯಕ್ರಮಕ್ಕೆ ಆಂತರಿಕ ಉದ್ಯೋಗಿಗಳ ನಾಮನಿರ್ದೇಶನದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಅಮೆಜಾನ್​ ಇಂಡಿಯಾ ಹೇಳಿದೆ.

ಅಂಚೆ ಇಲಾಖೆ ವಿಮೆ ಪಾಲಿಸಿ ಪಡೆದವರಿಗೊಂದು ಮಹತ್ವದ ಮಾಹಿತಿ

ಅಮೆಜಾನ್​ ಗ್ರಾಹಕರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದಾಗಿದೆ. ನಗದು ಅಥವಾ ತಮ್ಮ ಹಳೆಯ ಮೊಬೈಲ್​ ಫೋನ್​ಗಳನ್ನು ನೀಡಿದ್ದಲ್ಲಿ ಅದನ್ನು ಸರಿಪಡಿಸಿ ಅಮೆಜಾನ್, ಮಕ್ಕಳಿಗೆ ನೀಡಲಿದೆ. 1 ಲಕ್ಷ ಹಿಂದುಳಿದ ವರ್ಗಗಳ ಮಕ್ಕಳಿಗೆ ನೆರವಾಗುವುದು ಅಮೆಜಾನ್​ ಉದ್ದೇಶವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...