alex Certify ಸಣ್ಣ ಪಟ್ಟಣಗಳತ್ತಲೂ ಮುಖ ಮಾಡಿದ ಅಮೆಜಾನ್​ ಇಂಡಿಯಾ: 290 ನಗರಗಳಲ್ಲಿ ಪ್ಯಾಂಟ್ರಿ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ಪಟ್ಟಣಗಳತ್ತಲೂ ಮುಖ ಮಾಡಿದ ಅಮೆಜಾನ್​ ಇಂಡಿಯಾ: 290 ನಗರಗಳಲ್ಲಿ ಪ್ಯಾಂಟ್ರಿ ಸೇವೆ

ವೇಗವಾಗಿ ಬೆಳೆಯುತ್ತಿರುವ ಕಿರಾಣಿ ವ್ಯಾಪಾರದ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿರುವ ಅಮೆಜಾನ್​ ಇಂಡಿಯಾ ದೇಶದಲ್ಲಿ ಎರಡನೇ ಹಂತದ ಅಂದರೆ ನಾನ್​ ಮೆಟ್ರೋ ಪಟ್ಟಣಗಳ ಗ್ರಾಹಕರನ್ನು ಸೆಳೆಯಲು ಪ್ಲಾನ್​ ರೂಪಿಸುತ್ತಿದೆ.

ಇ ಕಾಮರ್ಸ್ ದೈತ್ಯ ಅಮೆಜಾನ್​ ಹೊಸ ಗ್ರಾಹಕರ ಸೇರ್ಪಡೆಯಲ್ಲಿ 20 ಪ್ರತಿಶತ ಏರಿಕೆಯನ್ನು ಕಂಡಿದೆ. ವಿಶೇಷವಾಗಿ 2 ಹಾಗೂ ಮೂರನೇ ಹಂತದ ಪಟ್ಟಣಗಳಲ್ಲಿ ಹೆಚ್ಚಿನ ಏರಿಕೆ ಕಂಡಿದೆ. 65 ಪ್ರತಿಶತ ಹೊಸ ಗ್ರಾಹಕರಲ್ಲಿ 85 ಪ್ರತಿಶತ ಇಂತಹ ಪಟ್ಟಣಗಳಿಗೆ ಸೇರಿದವರು ಎಂದು ತಿಳಿದುಬಂದಿದೆ.

ಅದರಲ್ಲೂ ವಿಶೇಷವಾಗಿ ಕಿರಾಣಿ ವಿಭಾಗದಲ್ಲಿ 60 ಪ್ರತಿಶತ ಗ್ರಾಹಕರು 2 ಹಾಗೂ 3ನೇ ವರ್ಗದ ಪಟ್ಟಣಕ್ಕೆ ಸೇರಿದವರೇ ಆಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ 10 ನಗರಗಳಲ್ಲಿ ಅಮೆಜಾನ್​​ ಪ್ಯಾಂಟ್ರಿಯೊಂದಿಗೆ ಫ್ರೆಶ್​ ಸೇವೆಯನ್ನೂ ಸಂಯೋಜಿಸಿ ಎಕ್ಸ್​ಪ್ರೆಸ್​ ವಿತರಣಾ ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಇದೀಗ ಅಮೆಜಾನ್​​ ಫ್ರೆಶ್​ ಲಭ್ಯವಿಲ್ಲದ 290 ನಗರಗಳಲ್ಲಿ ಪ್ಯಾಂಟ್ರಿ ಸೇವೆ ಮುಂದುವರಿಯಲಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಅಮೆಜಾನ್​ ಇಂಡಿಯಾದ ಉಪಾಧ್ಯಕ್ಷ ಮನಿಷ್​ ತಿವಾರಿ, ಕಿರಾಣಿ ವಿಭಾಗದಲ್ಲಿ ದುಪ್ಪಟ್ಟು ಬೆಳವಣಿಗೆ ಕಂಡಿದೆ. ಇದೊಂದು ಸಣ್ಣ ಮಾರುಕಟ್ಟೆಯಾಗಿದ್ದರೂ ಈಗಾಗಲೇ ಗಮನಾರ್ಹ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...