alex Certify ಆನ್​ಲೈನ್​ ಡೆಲಿವರಿಗೆ ಕಾಯುತ್ತಿದ್ದ ಗ್ರಾಹಕನಿಗೆ ಬಂದಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್​ಲೈನ್​ ಡೆಲಿವರಿಗೆ ಕಾಯುತ್ತಿದ್ದ ಗ್ರಾಹಕನಿಗೆ ಬಂದಿದ್ದೇನು ಗೊತ್ತಾ…?

ಕೊರೊನಾ ಸಾಂಕ್ರಾಮಿಕದಿಂದಾಗಿ ಆನ್​ಲೈನ್​ ಮಾರುಕಟ್ಟೆಗಳಲ್ಲಿ ಕೊಳ್ಳುವವರ ಸಂಖ್ಯೆ ಅಧಿಕವಾಗಿದೆ. ಎಲೆಕ್ಟ್ರಾನಿಕ್​ ವಸ್ತುಗಳು, ಆಹಾರ, ದಿನಸಿ ಸಾಮಗ್ರಿ, ಬಟ್ಟೆ ಹೀಗೆ ಇ ಮಾರುಕಟ್ಟೆಯಲ್ಲಿ ಸಿಗದ ವಸ್ತುವೇ ಇಲ್ಲ.

ಆದರೆ ಈ ಆನ್​ಲೈನ್​ ಮಾರುಕಟ್ಟೆಗಳಲ್ಲಿ ಆರ್ಡರ್​ ಮಾಡಿದ ವಸ್ತುಗಳೆಲ್ಲವೂ ಸರಿಯಾದ ಸ್ಥಿತಿಯಲ್ಲಿಯೇ ನಿಮ್ಮ ಕೈ ಸೇರುತ್ತೆ ಎಂದು ಹೇಳೋಕೆ ಸಾಧ್ಯವಿಲ್ಲ.

ಎಲೆಕ್ಟ್ರಾನಿಕ್​ ವಸ್ತು ಬುಕ್​ ಮಾಡಿದವರಿಗೆ ಕಲ್ಲು, ಬಟ್ಟೆ ಬುಕ್​ ಮಾಡಿದವರಿಗೆ ಮತ್ತಿನ್ನೇನೋ ವಸ್ತು ಕೈ ಸೇರೋದು ಹೀಗೆ ಸಾಕಷ್ಟು ಪ್ರಕರಣಗಳು ನಡೆದು ಹೋಗಿವೆ. ಇದೀಗ ಇದೇ ಸಾಲಿಗೆ ಇನ್ನೊಂದು ಘಟನೆ ಸೇರಿದೆ.

ಸೋಶಿಯಲ್​ ಮೀಡಿಯಾದಲ್ಲಿ ಗ್ರಾಹಕರೊಬ್ಬರು ಈ ವಿಚಾರ ಶೇರ್​ ಮಾಡಿದ್ದು ತಾವು ಮಾಡಿದ ಆರ್ಡರ್​ಗೆ ಬದಲಾಗಿ ಪಾರ್ಲೆ ಜಿ ಬಿಸ್ಕಟ್​ನ್ನು ಪಡೆದಿರೋದಾಗಿ ಹೇಳಿಕೊಂಡಿದ್ದಾರೆ.

ಫೇಸ್​ಬುಕ್​ನಲ್ಲಿ ಆನ್​ಲೈನ್​ ಮಾರುಕಟ್ಟೆಯ ಗ್ರಾಹಕನೊಬ್ಬ ಈ ವಿಚಾರವನ್ನ ಶೇರ್​ ಮಾಡಿದ್ದಾರೆ: ನೀವು ಅಮೆಜಾನ್​ನಿಂದ ಆರ್ಡರ್​ ಮಾಡಿದ ವಸ್ತುವನ್ನ ಪಡೆಯೋ ಬದಲು ಪಾರ್ಲೆ ಜಿ ಬಿಸ್ಕಟ್​ಗಳನ್ನು ಪಡೆದರೆ…..ಈಗ ಚಹ ಮಾಡಬೇಕು ಎಂದು ವಿಕ್ರಂ ಬುರಗೋಹೈನ್​ ಶೀರ್ಷಿಕೆ ನೀಡಿದ್ದಾರೆ.

ಅನೇಕರು ನೀವು ನಿಜವಾಗಿಯೂ ಯಾವ ಐಟೆಮ್​ ಬುಕ್​ ಮಾಡಿದ್ದೀರಿ ಎಂದು ಅನೇಕರು ಕಮೆಂಟ್​ ಸೆಕ್ಷನ್​ನಲ್ಲಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅವರು ರಿಮೋಟ್​ ಕಂಟ್ರೋಲ್​ ಕಾರು ಎಂದು ಉತ್ತರ ನೀಡಿದ್ದಾರೆ.

ಆದರೆ ಅಮೆಜಾನ್​ ಎಸಗಿದ ಈ ಪ್ರಮಾದದ ಬಗ್ಗೆ ವಿಕ್ರಮ್​ ಆಕ್ರೋಶ ಹೊರಹಾಕಿಲ್ಲ ಬದಲಾಗಿ ಫನ್ನಿಯಾಗಿ ಬಿಸ್ಕಟ್​ ಬಂದಮೇಲೆ ಚಹ ಮಾಡಲೇಬೇಕಲ್ಲವೇ ಎಂದು ಹಾಸ್ಯ ಮಾಡಿದ್ದಾರೆ.

When you get Parle-G biscuit instead of what you ordered from Amazon India….hahahahaha. Ab Chai banana padega.. 😛

Posted by Vikram Buragohain on Tuesday, June 22, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...