alex Certify ರಾಮ್​-ಲೀಲಾ ನೃತ್ಯ ಮಾಡಿದ ಕೊರಿಯನ್​ ತಂಡ; ವಿಡಿಯೋ ನೋಡಿ ಮೆಚ್ಚಿಕೊಂಡ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮ್​-ಲೀಲಾ ನೃತ್ಯ ಮಾಡಿದ ಕೊರಿಯನ್​ ತಂಡ; ವಿಡಿಯೋ ನೋಡಿ ಮೆಚ್ಚಿಕೊಂಡ ಜನ

ದಕ್ಷಿಣ ಕೊರಿಯನ್ನರು ತಮ್ಮ ಕೃತಜ್ಞತೆ ಅರ್ಪಿಸುವ ಚುಸೋಕ್​ ಹಬ್ಬದ ಸಂದರ್ಭದಲ್ಲಿ ‘ರಾಮ್​-ಲೀಲಾ’ ಹಾಡುಗಳಿಗೆ ನೃತ್ಯ ಮಾಡಿದ್ದು, ನೆಟ್ಟಿಗರು ಪ್ರಭಾವಿತರಾಗಿದ್ದಾರೆ.

ಸಾಮಾನ್ಯವಾಗಿ ವಿದೇಶಿಗರು ಭಾರತೀಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ವೀಡಿಯೋಗಳನ್ನು ನೋಡುವುದು ನೆಟ್ಟಿಗರಿಗೆ ಸಂತೋಷಕರವಾಗಿರುತ್ತದೆ. ಭಾರತೀಯ ಹಾಡುಗಳು, ವಿಶೇಷವಾಗಿ ಬಾಲಿವುಡ್​ ಚಲನಚಿತ್ರಗಳು, ಪ್ರಪಂಚದಾದ್ಯಂತ ಜನಪ್ರಿಯವಾಗಿವೆ ಮತ್ತು ವಿದೇಶಿಯರ ಗ್ರೂಪ್​ಗಳ ಅನೇಕ ವೀಡಿಯೊಗಳು ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತದೆ.

ಅಂತಹ ಒಂದು ವೀಡಿಯೊವನ್ನು ದಕ್ಷಿಣ ಕೊರಿಯಾದ ಡಿಜಿಟಲ್​ ಕಂಟೆಂಟರ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಆರು ದಿನಗಳ ಹಿಂದೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡ ವೀಡಿಯೊ 1.3 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಯಾಗಿದೆ.

ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಿರುವ ತಂಡ ತಮ್ಮ ಥ್ಯಾಂಕ್ಸ್ ​ಗಿವಿಂಗ್​ ಹಬ್ಬದ ಸಮಯದಲ್ಲಿ ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ನಟಿಸಿದ 2013 ರ ಚಲನಚಿತ್ರ ‘ಗೋಲಿಯೋನ್​ ಕಿ ರಾಸ್ಲೀಲಾ ರಾಮ್​-ಲೀಲಾ’ ಚಿತ್ರದ ‘ನಾಗಡ ಸಂಗ್​ ಧೋಲ್​’ ಮತ್ತು ‘ತತ್ತಡ್​ ತಟ್ಟದ್​’ ಹಾಡುಗಳಿಗೆ ಪ್ರದರ್ಶನ ನೀಡುವುದನ್ನು ಕಾಣಬಹುದು.

ಈವೆಂಟ್​ ಅನ್ನು ಐಎಫ್​ಎಸ್​ಸಿ ಆಯೋಜಿಸಿದೆ. ಕೊರಿಯನ್​ ಥ್ಯಾಂಕ್ಸ್ ​ಗಿವಿಂಗ್​ ಹಬ್ಬವಾಗಿರುವ ಚುಸೋಕ್​ ಹಬ್ಬವನ್ನು ಪೂರ್ವಭಾವಿಯಾಗಿ ಆಚರಿಸಲು ಇದನ್ನು ಆಯೋಜಿಸಲಾಗಿದೆ ಎಂದು ವೀಡಿಯೊದ ಶೀರ್ಷಿಕೆ ಹೇಳುತ್ತದೆ.

ಹಬ್ಬವನ್ನು ಹಂಗವಿ ಎಂದೂ ಸಹ ಕರೆಯುತ್ತಾರೆ, ಇದರರ್ಥ ಶರತ್ಕಾಲದ ಮಧ್ಯದ ಹಬ್ಬ ಅಥವಾ ಸುಗ್ಗಿಯ ಹಬ್ಬ. ದಕ್ಷಿಣ ಕೊರಿಯಾದಲ್ಲಿ ಮೂನ್​ ಕ್ಯಾಲೆಂಡರ್​ನ ಎಂಟನೇ ತಿಂಗಳ 15 ನೇ ದಿನದಂದು ಇದನ್ನು ಮೂರು ದಿನ ಆಚರಿಸಲಾಗುತ್ತದೆ. ನೆಟ್ಟಿಗರಂತೂ ವಿಡಿಯೋ ನೋಡಿ ಖುಷಿಪಟ್ಟು ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...