alex Certify ‘ಕೇಂದ್ರ ಸರ್ಕಾರದಿಂದ `ಸರ್ವರ್ ಹ್ಯಾಕ್’ ಆರೋಪ’ : ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಶಾಸಕ ಯತ್ನಾಳ್ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೇಂದ್ರ ಸರ್ಕಾರದಿಂದ `ಸರ್ವರ್ ಹ್ಯಾಕ್’ ಆರೋಪ’ : ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಶಾಸಕ ಯತ್ನಾಳ್ ಆಗ್ರಹ

ವಿಜಯಪುರ : ಕೇಂದ್ರ ಸರ್ಕಾರ(Central Government) ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಸರ್ವರ್ ಹ್ಯಾಕ್ (Server hack) ಮಾಡಿಸುತ್ತಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ (Minister Satish Jarkiholi) ಆರೋಪದ ವಿಚಾರಕ್ಕೆ ಶಾಸಕ ಬಸನಗೌಡಪಾಟೀಲ್ ಯತ್ನಾಳ್ (MLA Basanagouda Patil Yatnal) ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಟ್ವೀಟರ್ ನಲ್ಲಿ ಕಿಡಿಕಾರಿರುವ ಬಸನ ಗೌಡಪಾಟೀಲ್ ಯತ್ನಾಳ್, ಸಿದ್ದರಾಮಯ್ಯನವರು ನೆನ್ನೆ “Fake News” ಹರಡಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ ಎಂಬ ಸುದ್ದಿ ನೋಡಿದೆ. ಇವರ ಮಂತ್ರಿ ಮಂಡಲದ ಮಂತ್ರಿ “ರಾಜ್ಯ ಸರ್ಕಾರದ ಸರ್ವರ್ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ” ಎಂದು ಹೇಳಿರುವುದು “Fake News”. ಇಲ್ಲವೇ ಮಂತ್ರಿಗಳು ಹಾಗು ರಾಜ್ಯ ಸರ್ಕಾರ ಇದನ್ನು ಸಾಬೀತುಪಡಿಸಬೇಕು. ಪೊಳ್ಳು ಭರವಸೆಗಳನ್ನು ನೀಡಿ, ಈಡೇರಿಸಲಾಗದೆ ಈಗ ದಿನಕ್ಕೊಂದು ನೆಪ, ಹೊಸ ಕಥೆ ಹೇಳುವುದು ಕರ್ನಾಟಕ ಸರ್ಕಾರಕ್ಕೆ ರೂಢಿಯಾಗಿದೆ ಎಂದು ಕಿಡಿಕಾರಿದ್ದಾರೆ.

ನಮ್ಮ ಮಷಿನ್ ಹ್ಯಾಕ್ ಮಾಡಿ ಕೇಂದ್ರದವರು ಸ್ಥಗಿತ ಮಾಡಿದ್ದಾರೆ. ಇವಿಎಂ ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಡಿಪಾರ್ಟ್ಮೆಂಟ್ ಕೂಡ ಹ್ಯಾಕ್ ಮಾಡಿದೆ. ಹಾಗಾಗಿ ತಡವಾಗುತ್ತಿದೆ. ಅದನ್ನ ಸರಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಎಷ್ಟೇ ಹ್ಯಾಕ್ ಮಾಡಿದರೂ ನಮ್ಮ ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...