alex Certify ಎಡ್‌-ಟೆಕ್‌ ಯೂನಿಕಾರ್ನ್ ವಿರುದ್ಧ ಸಿಡಿದೆದ್ದು ಹೊಸ ಯೂಟ್ಯೂಬ್ ಚಾನೆಲ್ ಸೃಷ್ಟಿಸಿದ ಶಿಕ್ಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಡ್‌-ಟೆಕ್‌ ಯೂನಿಕಾರ್ನ್ ವಿರುದ್ಧ ಸಿಡಿದೆದ್ದು ಹೊಸ ಯೂಟ್ಯೂಬ್ ಚಾನೆಲ್ ಸೃಷ್ಟಿಸಿದ ಶಿಕ್ಷಕರು

ಫಿಸಿಕ್ಸ್‌ವಾಲಾ ಎಡ್‌ಟೆಕ್ ಸಂಸ್ಥೆ ಹಾಗೂ ಸಂಕಲ್ಪ್ ಯೂಟ್ಯೂಬ್ ಚಾನೆಲ್ ನಡುವಿನ ವಿವಾದವೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ.

ಏನಿದು ಸಂಕಲ್ಪ್ ?

ಫಿಸಿಕ್ಸ್‌ವಾಲಾದಲ್ಲಿ (ಯೂನಿಕಾರ್ನ್ ಕಂಪನಿ) ಕೆಲಸ ಮಾಡುತ್ತಿದ್ದ ಶಿಕ್ಷಕರ ಸಮೂಹವೊಂದು ಕಳೆದ ತಿಂಗಳು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ’ಸಂಕಲ್ಪ್‌’ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್‌ ಒಂದನ್ನು ಸೃಷ್ಟಿಸಿಕೊಂಡಿದೆ.

ಈ ಎಡ್‌-ಟೆಕ್ ಕಂಪನಿಯಲ್ಲಿ ಒಳ್ಳೆ ಹೆಸರು ಮಾಡಿದ್ದ ತರುಣ್ ಕುಮಾರ್‌, ಮನೀಶ್‌ ದುಬೆ ಮತ್ತು ಸರ್ವೇಶ್ ದೀಕ್ಷಿತ್‌ ಎಂಬ ಶಿಕ್ಷಕರು ತಮ್ಮ ದೂರದೃಷ್ಟಿಯನ್ನು ಪಿಸಿಕ್ಸ್‌ವಾಲಾ ದಾರಿ ತಪ್ಪಿಸಿದೆ ಎಂದು ಆರೋಪಿಸಿ ತಂತಮ್ಮ ಕೆಲಸಗಳಿಗೆ ರಾಜೀನಾಮೆ ಕೊಟ್ಟಿದ್ದರು. ಇದಾದ ಬೆನ್ನಿಗೆ ಯೂಟ್ಯೂಬ್ ಚಾನೆಲ್ ಸೃಷ್ಟಿಸಿರುವ ಇವರಿಗೆ ವಿದ್ಯಾರ್ಥಿಗಳಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಆರಂಭಗೊಂಡ ಒಂದೇ ತಿಂಗಳಿನಲ್ಲಿ ಈ ಯೂಟ್ಯೂಬ್‌ ಚಾನೆಲ್ಲಿಗೆ ಸದ್ಯ 325 ಸಾವಿರ ಚಂದಾದಾರರಿದ್ದಾರೆ.

ಫಿಸಿಕ್ಸ್‌ವಾಲಾ

ಅಲಕ್ ಪಾಂಡೇ ಹಾಗೂ ಪ್ರತೀಕ್ ಮಹೇಶ್ವರಿರಿಂದ 2020ರಲ್ಲಿ ಯೂಟ್ಯೂಬ್‌ ಚಾನೆಲ್ ಆಗಿ ಸ್ಥಾಪನೆಗೊಂಡ ಫಿಸಿಕ್ಸ್‌ವಾಲಾ ಸದ್ಯ ದೇಶದ 101ನೇ ಯೂನಿಕಾರ್ನ್ ಕಂಪನಿಯಾಗಿದ್ದು, ಒಟ್ಟಾರೆ 8,000 ಕೋಟಿ ರೂ. ಮೌಲ್ಯ ಹೊಂದಿದೆ ($1.1 ಶತಕೋಟಿ).

ರಾಷ್ಟ್ರೀಯ ಅರ್ಹತಾ ಕಂ ಪ್ರವೇಶ ಪರೀಕ್ಷೆಎ ಹಾಗೂ ಜಂಟಿ ಪ್ರವೇಶ ಪರೀಕ್ಷೆಯಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳಿಗೆ ಅನುವಾಗಲೆಂದು ಫಿಸಿಕ್ಸ್‌ವಾಲಾ ಅಪ್ಲಿಕೇಶನ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಇದರೊಂದಿಗೆ ಫಿಸಿಕ್ಸ್‌ವಾಲಾ JEE, NEET, GATE, SSC, UPSC, PSC, NDA, CA ಫೌಂಡೇಶನ್, CA ಮಧ್ಯಂತರ, CSIR NET, IIT JAM, MBA, NEET PG, ಹಾಗೂ CUET ಪರೀಕ್ಷೆಗಳಿಗೂ ಸಹ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಿದೆ.

ಜನವರಿ 2023ರ ವೇಳಗೆ ಫಿಸಿಕ್ಸ್‌ವಾಲಾ ಅಪ್ಲಿಕೇಶನ್ 10 ದಶಲಕ್ಷಕ್ಕೂ ಹೆಚ್ಚಿನ ಡೌನ್ಲೋಡ್‌ಗಳನ್ನು ಕಂಡಿದೆ.

ಏನಿದು ವಿವಾದ ?

ಫಿಸಿಕ್ಸ್‌ವಾಲಾದ ಎದುರಾಳಿ ಸಂಸ್ಥೆ ಅಡ್ಡಾ247ನಿಂದ ಐದು ಕೋಟಿ ರೂ. ಗಳ ಲಂಚ ಪಡೆದಿದ್ದಾರೆ ಎಂದು ಕೆಲ ಶಿಕ್ಷಕರ ಮೇಲೆ ಫಿಸಿಕ್ಸ್‌ವಾಲಾದಲ್ಲಿ ಶಿಕ್ಷಕರಾಗಿರುವ ಪಂಕಜ್ ಸಿಜಾರಿಯಾ ಆಪಾದನೆ ಮಾಡಿದ್ದರು. ಆದರೆ ಈ ಆಪಾದನೆಯಲ್ಲಿ ಹುರುಳಿಲ್ಲ ಎಂದು ಸಂಕಲ್ಪ್‌ ತನ್ನ ಚಾನೆಲ್‌ ಒಂದರಲ್ಲಿ ವಿಶೇಷ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದೆ.

ಈ ಭ್ರಷ್ಟಾಚಾರದ ಆಪಾದನೆಗಳ ಬೆನ್ನಿಗೆ ವಿದ್ಯಾರ್ಥಿಗಳು ಪಾವತಿ ಮಾಡುತ್ತಿರುವ ಶುಲ್ಕಕ್ಕೆ ಸೂಕ್ತವಾದ ಗುಣಮಟ್ಟದ ಶಿಕ್ಷಣವನ್ನು ಫಿಸಿಕ್ಸ್‌ವಾಲಾದ ಕೋಟಾ ಕೇಂದ್ರದಲ್ಲಿ ಕೊಡಲಾಗುತ್ತಿಲ್ಲ ಎಂದೂ ಸಹ ಸಂಕಲ್ಪ್ ತಂಡ ಗಂಭೀರವಾದ ಆಪಾದನೆ ಮಾಡಿದೆ.

ದೇಶದ ದೂರಗಾಮಿ ಪ್ರದೇಶಗಳಿಗೂ ಸಹ ಗುಣಮಟ್ಟದ ಶಿಕ್ಷಣ ತಲುಪಿಸಬೇಕೆಂಬ ತಮ್ಮ ಗುರಿಯನ್ನು ಫಿಸಿಕ್ಸ್‌ವಾಲಾದ ಆಡಳಿತ ದಾರಿ ತಪ್ಪಿಸುತ್ತಿತ್ತು ಎಂದು ಶಿಕ್ಷಕ ತರುಣ್ ಕುಮಾರ್‌ ದೂರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...