alex Certify ಬಾಕ್ಸಾಫೀಸ್‌ ನಲ್ಲಿ ಮುಂದುವರೆದ ʼರಾಕಿಭಾಯ್ʼ ನಾಗಾಲೋಟ; ಗಳಿಕೆಯಲ್ಲಿ ಬಾಲಿವುಡ್‌ ಚಿತ್ರಗಳನ್ನು ಹಿಂದಿಕ್ಕಿದ ‌ʼಕೆಜಿಎಫ್‌ 2ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಕ್ಸಾಫೀಸ್‌ ನಲ್ಲಿ ಮುಂದುವರೆದ ʼರಾಕಿಭಾಯ್ʼ ನಾಗಾಲೋಟ; ಗಳಿಕೆಯಲ್ಲಿ ಬಾಲಿವುಡ್‌ ಚಿತ್ರಗಳನ್ನು ಹಿಂದಿಕ್ಕಿದ ‌ʼಕೆಜಿಎಫ್‌ 2ʼ

ಬಿಡುಗಡೆಯಾದ ಕೆಲ ದಿನಗಳಲ್ಲೇ 1000 ಕೋಟಿ ರೂ. ಗಳಿಸಿದ ಕೆಜಿಎಫ್ ಚಾಪ್ಟರ್ 2 ರಾಜಮೌಳಿಯವರ ಆರ್​ಆರ್​​ಆರ್​ ಸಿನಿಮಾವನ್ನೇ ಹಿಂದಿಕ್ಕಿದೆ. ಆ ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಭಾರತದಲ್ಲಿ ಹೆಚ್ಚು ಗಳಿಕೆ ಕಂಡ ಎರಡನೇಯ ಚಿತ್ರವಾಗಿ ಹೊರಹೊಮ್ಮಿದೆ.

ಇದಕ್ಕೂ ಮೊದಲೇ ಬಿಡುಗಡೆ ದಿನದಲ್ಲೇ ಹೆಚ್ಚು ಆದಾಯ ಗಳಿಸಿದ ಮೂರನೇ ಚಿತ್ರ, ಮೊದಲ ವಾರ ಮತ್ತು ವೀಕೆಂಡ್​ನಲ್ಲೇ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಬಿಡುಗಡೆಯಾಗಿ ಐದು ವರ್ಷಗಳ ಬಳಿಕವೂ ಬಾಹುಬಲಿ 2 ಸಿನಿಮಾ ತನ್ನ ದಾಖಲೆಯನ್ನು ಹಾಗೆಯೇ ಉಳಿಸಿಕೊಂಡಿದ್ದು ಅದನ್ನು ಬೀಟ್​ ಮಾಡುವ ಸನಿಹಕ್ಕೆ ಕೆಜಿಎಫ್‌ ಚಾಪ್ಟರ್‌ 2 ಬರುತ್ತಿದೆ. ಇನ್ನೂ ಮುಂಬರುವ ದಿನಗಳಲ್ಲಿ ಕೆಜಿಎಫ್ ಹೇಗೆ ಇನ್ನಷ್ಟು ದಾಖಲೆಗಳನ್ನು ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದಿಷ್ಟೇ ಅಲ್ಲದೇ ಬಾಹುಬಲಿ ಸಿನಿಮಾವನ್ನು 10 ಕೋಟಿ ಜನರು ವೀಕ್ಷಣೆ ಮಾಡಿದ್ದರು. ಕೆಜಿಎಫ್ ಮತ್ತು ಆರ್​ಆರ್​ಆರ್​​ ಸಿನಿಮಾ 4.5 ಕೋಟಿ ಪ್ರೇಕ್ಷಕರು ನೋಡಿದ್ದಾರೆ.

ಭಾರತದಲ್ಲಿ ಬಾಹುಬಲಿ, ಕೆಜಿಎಫ್​ಗಿಂತಲೂ ಮೊದಲೇ 10 ಸಿನಿಮಾಗಳು ಹೆಚ್ಚು ಗಳಿಕೆ ಕಂಡು ಸಾರ್ವಕಾಲಿಕ ದಾಖಲೆ ಬರೆದಿವೆ. ಅವುಗಳ ಪಟ್ಟಿ ಈ ರೀತಿ ಇದೆ.

1. ಬಾಹುಬಲಿ 2 : ದಿ ಕನ್​ಕ್ಲೂಷನ್ – 1346.90 ಕೋಟಿ

2. ಕೆಜಿಎಫ್ ಚಾಪ್ಟರ್ 2 : 892 ಕೋಟಿ (20 ದಿನಗಳ ಅವಧಿ)

3. ಆರ್​ಆರ್​ಆರ್​​ – 887 ಕೋಟಿ (40 ದಿನಗಳಲ್ಲಿ )

4. ದಂಗಲ್ – 511.30 ಕೋಟಿ

5. 2.O – 508.50 ಕೋಟಿ

6. ಬಾಹುಬಲಿ : ದಿ ಬಿಗಿನಿಂಗ್​- 482 ಕೋಟಿ

7. ಪಿ.ಕೆ – 455 ಕೋಟಿ

8. ಅವೆಂಜರ್ಸ್ – ಎಂಡ್​ಗೇಮ್ – 442.70 ಕೋಟಿ

9. ಟೈಗರ್ ಜಿಂದಾ ಹೈ – 434.70 ಕೋಟಿ

10. ಸಂಜು – 434.30 ಕೋಟಿ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...