alex Certify ನಟಿ ಆಲಿಯಾ ಈ ಪ್ರಶ್ನೆಗೆ ನಾಚಿ ನೀರಾಗಿದ್ದೇಕೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಆಲಿಯಾ ಈ ಪ್ರಶ್ನೆಗೆ ನಾಚಿ ನೀರಾಗಿದ್ದೇಕೆ…..?

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್ ಆರ್ ಆರ್ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಬಿಡುಗಡೆಯ ಕಾರ್ಯಕ್ರಮದಲ್ಲಿ ನಟಿ ಆಲಿಯಾ ಭಟ್ ಕೂಡ ಇದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಪ್ರಶ್ನಿಸಿದ ಸುದ್ದಿಗಾರರು, ಆರ್ ನಿಮಗೆ ತುಂಬಾ ಅದೃಷ್ಟ ನೀಡುವ ಅಕ್ಷರವೇ? ಎಂದು ಪ್ರಶ್ನಿಸಿದ್ದರು. ಪ್ರಶ್ನೆ ಕೇಳಿದ್ದೇ ತಡ ಆಲಿಯಾ ಭಟ್ ನಾಚಿ ನೀರಾಗಿದ್ದಾರೆ.

ಏಕೆಂದರೆ ಅದು ಆಲಿಯಾಭಟ್ ಬಾಯ್ಫ್ರೆಂಡ್ ರಣಬೀರ್ ಕಪೂರ್ ಬಗ್ಗೆ ಕೇಳಿದ ಪ್ರಶ್ನೆಯಾಗಿತ್ತು. ಸದ್ಯ ಆಲಿಯಾ ಭಟ್ ನಾಚಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಕೂಡ ನಾಚಿಕೆಯ ಹಿಂದಿನ ರಹಸ್ಯ ಕೆಣಕುತ್ತಿದ್ದಾರೆ.

ಆ ಪ್ರಶ್ನೆಯನ್ನು ನಟ ರಣಬೀರ್ ಕಪೂರ್ ಅವರನ್ನೇ ಉಲ್ಲೇಖಿಸಿ ಕೇಳಲಾಗಿದೆ ಎಂಬುವುದನ್ನು ಆಲಿಯಾ ಭಟ್ ಕೂಡಲೇ ಅರ್ಥ ಮಾಡಿಕೊಂಡಿದ್ದಾರೆ. ಆ ನಂತರ ಉತ್ತರಿಸಿದ ನಟಿ, ಹೌದು ಆರ್ ಅಕ್ಷರವು ವರ್ಣಮಾಲೆಯ ಸುಂದರ ಅಕ್ಷರ. ಹಾಗೆಯೇ ಎ ಕೂಡ ಅಷ್ಟೇ ಸುಂದರ ಎಂದು ಹೇಳಿದ್ದಾರೆ. ಸದ್ಯದ ಗಾಸಿಪ್ ನಂತೆ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ರಿಲೇಷನ್ ಶಿಪ್ ನಲ್ಲಿದ್ದು, ಈ ವರ್ಷವೇ ಮದುವೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಗಾಸಿಪ್ ಹಾಗೆಯೇ ಇದ್ದು, ಮದುವೆ ಮಾತ್ರ ಇನ್ನೂ ನಿಶ್ಚಯವಾಗಿಲ್ಲ. ಹೀಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಈ ಮದುವೆಯ ಕುರಿತು ಪ್ರಶ್ನೆಯನ್ನು ಅಭಿಮಾನಿಗಳು ಕೇಳುವಂತಾಗಿದೆ.

ಆರ್ ಆರ್ ಆರ್ ಚಿತ್ರ ಜನವರಿ 7ರಂದು ತೆರೆಗೆ ಅಪ್ಪಳಿಸಲಿದೆ. ಟ್ರೇಲರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ಅಜಯ್ ದೆವ್ಗನ್, ಆಲಿಯಾಭಟ್, ಜೂನಿಯರ್ ಎನ್ ಟಿ ಆರ್ ಇದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...