alex Certify BIG NEWS: ಮಹಂತ್ ಗಿರಿ ಅನುಮಾನಾಸ್ಪದ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಹಂತ್ ಗಿರಿ ಅನುಮಾನಾಸ್ಪದ ಸಾವು

ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯ ಭಾಗಂಬರಿ ಮಠದ ತಮ್ಮ ಕೋಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ವಿಧಿವಿಜ್ಞಾನ ಮತ್ತು ವಿಶೇಷ ಪೊಲೀಸ್ ತಂಡಗಳು ಹಾಗೂ ಇನ್ಸ್‌ಪೆಕ್ಟರ್ ಜನರಲ್ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಇವರ ಕೋಣೆಯಿಂದ ಡೆತ್ ನೋಟ್ ಕೂಡ ದೊರಕಿದೆ ಎನ್ನಲಾಗಿದೆ.

ಈ ಮಧ್ಯೆ, ಮಹಂತ್ ಗಿರಿಯ ಶಿಷ್ಯ ಆನಂದ್ ಗಿರಿ, ಖಾಸಗಿ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವ ವೇಳೆಯಲ್ಲಿ ಇದೊಂದು ಕೊಲೆ, ಇದರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಸಿಎಂಗೇ ಸವಾಲ್ ಹಾಕಿದ ಮಾಜಿ ಪೊಲೀಸ್ ಅಧಿಕಾರಿ ಎತ್ತಾಕೊಂಡ್ ಹೋದ ಪೊಲೀಸರು

ಕೆಲವು ಮಂದಿ ಮಹಂತ್ ಮತ್ತು ಆನಂದ್ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ತಾನು ಅವರನ್ನು ಕೊನೆ ಬಾರಿಗೆ ನೋಡಿದಾಗ, ಆರೋಗ್ಯವಾಗಿ ಇದ್ದರು ಎಂದು ಆನಂದ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...