alex Certify ವೈರಲ್​ ಜ್ವರ ಅಟ್ಟಹಾಸ: ಕಳೆದ 24 ಗಂಟೆಗಳಲ್ಲಿ ಐವರು ಮಕ್ಕಳ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್​ ಜ್ವರ ಅಟ್ಟಹಾಸ: ಕಳೆದ 24 ಗಂಟೆಗಳಲ್ಲಿ ಐವರು ಮಕ್ಕಳ ಸಾವು

ಕೋವಿಡ್​ ಮೂರನೇ ಅಲೆಯ ಭಯದ ನಡುವೆಯೇ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಿಗೂಢ ಜ್ವರವೊಂದು ತನ್ನ ಕಬಂಧಬಾಹುವನ್ನು ಚಾಚುತ್ತಿದೆ. ಈ ನಿಗೂಢ ಜ್ವರದಿಂದ ಕಳೆದ 24 ಗಂಟೆಗಳಲ್ಲಿ 10 ವರ್ಷ ಕಡಿಮೆ ವಯಸ್ಸಿನ ಐವರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಎಲ್ಲಾ ಮಕ್ಕಳು ಡೆಂಗ್ಯೂ ಮಾದರಿಯ ಲಕ್ಷಣಗಳನ್ನು ಹೊಂದಿದ್ದರು ಎನ್ನಲಾಗಿದೆ.

ಆರ್ಯನ್​ ಪರ ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ಹೃತಿಕ್​ಗೆ ಟಾಂಗ್​ ಕೊಟ್ಟ ಕಂಗನಾ​​​

ಕಳೆದ 1 ತಿಂಗಳಲ್ಲಿ ಆಗ್ರಾ ಜಿಲ್ಲೆಯಲ್ಲಿ ಈ ನಿಗೂಢ ಜ್ವರದಿಂದಾಗಿ 40 ಮಕ್ಕಳು ಸೇರಿದಂತೆ 50 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಳೆದ 24 ಗಂಟೆಗಳಲ್ಲಿ ಸಾವನ್ನಪ್ಪಿದ ಐವರು ಮಕ್ಕಳನ್ನು ದಿವ್ಯಾ(8), ಶಿವಾನಿ(4), ಉಮಾ(7), ಲಕ್ಷ್ಮೀ( 3 ತಿಂಗಳು) ಹಾಗೂ ನಿತಿನ್​(8) ಎಂದು ಗುರುತಿಸಲಾಗಿದೆ.

ಅಂದ ಹಾಗೆ ಆಗ್ರಾ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನದವರೆಗೆ 250 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಇಂತಹ ರೋಗಿಗಳನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ. ವೈರಲ್​ ಜ್ವರ ಹೆಚ್ಚಿರುವ ಪ್ರದೇಶಗಳಲ್ಲಿ ಮೆಡಿಕಲ್​ ಕ್ಯಾಂಪ್​ ನಡೆಸಲಾಗ್ತಿದೆ ಎಂದು ಮೆಡಿಕಲ್​ ಆಫಿಸರ್​​ ಅರುಣ್​ ಕುಮಾರ್​ ಶ್ರೀವಾತ್ಸವ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...