alex Certify ವಾಹನ ಚಾಲನೆ ಮಾಡುವಾಗಿನ ಕಿರಿಕಿರಿಯಿಂದ ಹಲವು ದುಷ್ಪರಿಣಾಮ: ಸಂಶೋಧನೆಯಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಚಾಲನೆ ಮಾಡುವಾಗಿನ ಕಿರಿಕಿರಿಯಿಂದ ಹಲವು ದುಷ್ಪರಿಣಾಮ: ಸಂಶೋಧನೆಯಲ್ಲಿ ಬಹಿರಂಗ

ಲಂಡನ್​: ಟ್ರಾಫಿಕ್ ಜಾಮ್‌ ಆದಾಗ ವಾಹನ ಸವಾರರು ಕಿರಿಕಿರಿ ಅನುಭವಿಸುವುದು ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಚಾಲನೆ ಮಾಡುವಾಗ ಹತಾಶೆ ಭಾವನೆ ಮೂಡುತ್ತದೆ. ಇದು ಹಲವು ಜನರಲ್ಲಿ ಒತ್ತಡ ಮತ್ತು ಕೋಪಕ್ಕೆ ಕಾರಣವಾಗುತ್ತದೆ. ಆದರೆ ಇಂಥ ಚಾಲನೆಯಿಂದ ಹೆಚ್ಚಿನ ಅಪಾಯವಾಗಲಿದೆ, ಅನಾರೋಗ್ಯಕ್ಕೆ ಇದು ದಾರಿ ಮಾಡಿಕೊಡುತ್ತದೆ ಎಂದು ಲಂಡನ್​ ಸಂಶೋಧಕರು ಹೇಳಿದ್ದಾರೆ.

ಇತ್ತೀಚೆಗೆ ನಡೆದಿರುವ ಹೊಸ ಅಧ್ಯಯನದಿಂದ ಇದು ಬಹಿರಂಗಗೊಂಡಿದೆ. 1,700 ಕ್ಕೂ ಹೆಚ್ಚು ಚಾಲಕರ ಕಾರ್ಯಕ್ಷಮತೆಯನ್ನು ನೋಡಿದ ಮೇಲೆ ಇದನ್ನು ಕಂಡುಹಿಡಿಯಲಾಗಿದೆ. ಹೀಗೆ ಕಿರಿಕಿರಿ ಅನುಭವಿಸುವ ಚಾಲಕರು ಅದೇ ಒತ್ತಡದಲ್ಲಿ ಕಾರು ಚಾಲನೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬ ಬಗ್ಗೆ ಅಧ್ಯಯನಕಾರರು ಸಂಶೋಧನೆ ನಡೆಸಿದ್ದಾರೆ.

ಅಪಘಾತ ವಿಶ್ಲೇಷಣೆ ಮತ್ತು ತಡೆಗಟ್ಟುವಿಕೆ ಜರ್ನಲ್‌ನಲ್ಲಿ ಇದನ್ನು ಪ್ರಕಟಿಸಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕಾರು ಚಾಲನೆ ಮಾಡಿದರೆ ಅಪಘಾತವಾಗುವ ಸಾಧ್ಯತೆ ಹೆಚ್ಚು ಮಾತ್ರವಲ್ಲದೇ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದಿರುವ ಸಂಶೋಧಕರು, ಇದನ್ನು ಆಕ್ರಮಣಕಾರಿ ಚಾಲನೆ ಎಂದು ಕರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...