alex Certify ಮದುವೆಗೆ ಹೋಗಿ ಫೋಟೋ ತೆಗೆಸಿಕೊಂಡವರಿಗೆ ಬಿಗ್ ಶಾಕ್: ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರ ವಿರುದ್ಧವೂ ಕೇಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಹೋಗಿ ಫೋಟೋ ತೆಗೆಸಿಕೊಂಡವರಿಗೆ ಬಿಗ್ ಶಾಕ್: ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರ ವಿರುದ್ಧವೂ ಕೇಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ಕಳೆದ ಜುಲೈನಲ್ಲಿ ನಡೆದಿದ್ದ ಅದ್ದೂರಿ ಮದುವೆಗೆ ಹೋದವರಿಗೆ ಆತಂಕ ಎದುರಾಗಿದೆ.

ಈ ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. 52 ವರ್ಷದ ವ್ಯಕ್ತಿಯ ಮದುವೆ 16 ವರ್ಷದ ಹುಡುಗಿಯೊಂದಿಗೆ ಅದ್ದೂರಿಯಾಗಿ ಕಾರವಾರದ ದೇವಸ್ಥಾನದಲ್ಲಿ ನೆರವೇರಿತ್ತು. ಹುಡುಗಿಗೆ ವಯಸ್ಸಾಗದಿದ್ದರೂ, ದೈಹಿಕವಾಗಿ ವಯಸ್ಕಳಂತೆ ಕಾಣುತ್ತಿದ್ದ ಕಾರಣ ಮದುವೆಗೆ ಬಂದವರಿಗೆ ಅನುಮಾನ ಬಂದಿರಲಿಲ್ಲ.

ಮೂರು ತಿಂಗಳ ನಂತರ ಆಕೆಗೆ 16 ವರ್ಷ ಎನ್ನುವುದು ಅಂಗನವಾಡಿ ಕಾರ್ಯಕರ್ತೆಯಗೆ ಗೊತ್ತಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಕ್ರಮಕೈಗೊಂಡಿದ್ದು, ವರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ಮದುವೆಯಲ್ಲಿ ಭಾಗಿಯಾಗಿದ್ದ ಬಂಧು ಬಾಂಧವರಿಗೆ ನೋಟಿಸ್ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. ಮದುವೆಯಲ್ಲಿ ಫೋಟೋ ತೆಗೆಸಿಕೊಂಡವರೀಗ ಕಂಗಾಲಾಗಿದ್ದಾರೆ. ಹುಡುಗಿ ದೈಹಿಕವಾಗಿ ವಯಸ್ಕಳಂತೆ ಇದ್ದ ಕಾರಣ ವಿವಾಹ ಮಾಡಲಾಗಿತ್ತು. ಆಕೆ ವಯಸ್ಸು ತಿಳಿಯದೇ ಮದುವೆಗೆ ಹೋದವರ ವಿರುದ್ಧವೂ ಕೇಸ್ ದಾಖಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...