alex Certify ಮಹಿಳಾ ಸೇನಾಧಿಕಾರಿಗಳ ಹುದ್ದೆ ಖಾಯಂಮಾತಿ: ಸುಪ್ರೀಂಗೆ ಮಹತ್ವದ ಮಾಹಿತಿ ನೀಡಿದ ಸೇನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಸೇನಾಧಿಕಾರಿಗಳ ಹುದ್ದೆ ಖಾಯಂಮಾತಿ: ಸುಪ್ರೀಂಗೆ ಮಹತ್ವದ ಮಾಹಿತಿ ನೀಡಿದ ಸೇನೆ

ಎಲ್ಲಾ ಅರ್ಹತಾ ಮಾನದಂಡಗಳ ಪೂರೈಕೆ ಬಳಿಕವೂ ಖಾಯಂ ಉದ್ಯೋಗ​ ನೀಡಲು ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ 11 ಮಂದಿ ಮಹಿಳೆಯರಿಗೆ ಶಾಶ್ವತ ಆಯೋಗವನ್ನು ನೀಡುವುದಾಗಿ ಭಾರತೀಯ ಸೇನೆಯು ಸರ್ವೋಚ್ಛ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ನ್ಯಾಯಾಂಗದ ನಿರ್ಧಾರಗಳನ್ನು ಅವಮಾನಿಸಿದಲ್ಲಿ ಸೇನಾ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಈ ಹಿಂದೆಯೇ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು. ಸುಪ್ರೀಂ ಕೋರ್ಟ್​ನ ಎಚ್ಚರಿಕೆಯ ಬಳಿಕ ಮಹಿಳಾ ಅಧಿಕಾರಿಗಳ ಹುದ್ದೆ ಖಾಯಂಗೊಳಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಭಾರತೀಯ ಸೇನೆ ಹೇಳಿದೆ. ನವೆಂಬರ್​ 26ರರ ಒಳಗಾಗಿ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಸೂಚನೆ ನೀಡಿದೆ.

ಇದರ ಜೊತೆಯಲ್ಲಿ, ಮಹಿಳಾ ಶಾರ್ಟ್​ ಸರ್ವೀಸ್​ ಕಮೀಷನ್ಡ್​ ಆಫೀಸರ್​ಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಷ್ಪಕ್ಷಪಾತ ಕ್ರಮ ಕೈಗೊಂಡ ಸೇನಾ ಅಧಿಕಾರಿಗಳ ನಡೆಯನ್ನೂ ನ್ಯಾಯಪೀಠ ಪ್ರಶಂಸಿಸಿದೆ.

ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್​ ಮಹಿಳಾ ಅಧಿಕಾರಿಗಳಿಗೆ ಸೇನೆಯಲ್ಲಿ ಖಾಯಂ ಆಯೋಗ ಒದಗಿಸುವಂತೆ ಸೂಚನೆ ನೀಡಿತ್ತು. ಅಲ್ಲದೇ ಈ ಅಧಿಕಾರಿಗಳು ಇನ್ಮುಂದೆ ಕಮಾಂಡ್​ ಹುದ್ದೆಗೆ ಅರ್ಹರಾಗಿದ್ದಾರೆ ಎಂದೂ ಹೇಳಿತ್ತು. ಸೇನೆಯ ಎಲ್ಲಾ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗವನ್ನು ಮೂರು ತಿಂಗಳ ಒಳಗಾಗಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...