alex Certify ಕಾಮದ ಮದದಲ್ಲಿ ಅಕ್ಕನಿಂದಲೇ ಘೋರ ಕೃತ್ಯ, ತಮ್ಮನ ಕೊಲೆ ಮಾಡಿದ್ದ ಪ್ರಿಯಕರ ಸೇರಿ ಇಬ್ಬರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮದ ಮದದಲ್ಲಿ ಅಕ್ಕನಿಂದಲೇ ಘೋರ ಕೃತ್ಯ, ತಮ್ಮನ ಕೊಲೆ ಮಾಡಿದ್ದ ಪ್ರಿಯಕರ ಸೇರಿ ಇಬ್ಬರು ಅರೆಸ್ಟ್

ಹುಬ್ಬಳ್ಳಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಮ್ಮನನ್ನು ಪ್ರಿಯಕರನೊಂದಿಗೆ ಸೇರಿ ಅಕ್ಕನೇ ಕೊಲೆಮಾಡಿದ ಘಟನೆ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನೂಲ್ವಿಯಲ್ಲಿ ಶಂಭುಲಿಂಗ ಕಮಡೊಳ್ಳಿ ಕೊಲೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರಿ ಬಸವ್ವ(40) ಮತ್ತು ಚನ್ನಪ್ಪಗೌಡ(35) ಅವರನ್ನು ಬಂಧಿಸಲಾಗಿದೆ. ಬಸವ್ವ ಮತ್ತು ಚನ್ನಪ್ಪಗೌಡ ನಡುವೆ ಅಕ್ರಮ ಸಂಬಂಧವಿದ್ದು, ಈ ವಿಚಾರ ತಿಳಿದಿದ್ದ ಶಂಭುಲಿಂಗ ಇಬ್ಬರಿಗೂ ಬೈದಾಡಿ ಬುದ್ಧಿವಾದ ಹೇಳಿದ್ದಾನೆ.

ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಶಂಭುಲಿಂಗನನ್ನು ಕೊಲೆಮಾಡಲು ಅಕ್ಕ ಬಸವ್ವ ಪ್ರಿಯಕರ ಚನ್ನಪ್ಪಗೌಡನಿಗೆ ತಿಳಿಸಿದ್ದಾಳೆ. ಮೇ 13 ರಂದು ರಾತ್ರಿ ಶಂಭುಲಿಂಗನ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಚನ್ನಪ್ಪ ಗೌಡ ಕೊಲೆ ಮಾಡಿದ್ದಾನೆ. ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಕೊಲೆ ವಿಚಾರ ಹೇಳಿದ್ದು, ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...