alex Certify ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ನಟ ಉಮೇಶ್​ ಹೆಗ್ಡೆ ವಿಧಿವಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ನಟ ಉಮೇಶ್​ ಹೆಗ್ಡೆ ವಿಧಿವಶ

ರಂಗಭೂಮಿ, ಕಿರುತೆರೆ ಹಾಗೂ ಚಂದನವನದ ಹಿರಿಯ ನಟ ಉಮೇಶ್​ ಹೆಗ್ಡೆ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ನಿನ್ನೆ ಸಂಜೆ ಸಿನಿಮಾ ಶೂಟಿಂಗ್​ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಸಂಜೆ 7:45ರ ಸುಮಾರಿಗೆ ಅವರಿಗೆ ಹೃದಾಯಾಘಾತವಾಗಿತ್ತು.

ಉಮೇಶ್​ ಹೆಗ್ಡೆಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಉಮೇಶ್​ ಮೃತದೇಹವನ್ನು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಬಳಿಕ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ.

ಉಮೇಶ್​ ಹೆಗ್ಡೆ ಸಾಕಷ್ಟು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದರು. 71 ವರ್ಷ ವಯಸ್ಸಿನ ಉಮೇಶ್​ ರಂಗಭೂಮಿ ಕಲಾವಿದರು ಸಹ ಹೌದು. ಹಿರಿಯ ನಟನ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕ ಸಾಕಷ್ಟು ತಾರೆಯರು ಉಮೇಶ್​ ಹೆಗ್ಡೆ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...