alex Certify BREAKING NEWS: ಕರ್ಫ್ಯೂ ಹೊತ್ತಲ್ಲೇ ಭೀಕರ ಅಪಘಾತ, ಕಾರ್ ನಲ್ಲಿದ್ದ ನಾಲ್ವರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಕರ್ಫ್ಯೂ ಹೊತ್ತಲ್ಲೇ ಭೀಕರ ಅಪಘಾತ, ಕಾರ್ ನಲ್ಲಿದ್ದ ನಾಲ್ವರು ಸಾವು

ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿಯಾಗಿ ಕಾರ್ ನಲ್ಲಿದ್ದ ನಾಲ್ವರು ಸಾವನಪ್ಪಿದ್ದಾರೆ. ಇನ್ನು ನಾಲ್ವರ ಸ್ಥಿತಿ ಗಂಭೀರವಾಗಿದೆ.

ನೈಸ್ ರಸ್ತೆಯಲ್ಲಿ ರಸ್ತೆ ದುರಸ್ತಿ ಕಾರ್ಯದ ಕಾರಣ ಸ್ಲೋ ಮೂವಿಂಗ್ ಇತ್ತು. ವಾಹನಗಳು ನಿಧಾನವಾಗಿ ಸಾಗುವಾಗ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ವ್ಯಾಗನಾರ್ ಕಾರ್ ಗೆ ಡಿಕ್ಕಿ ಹೊಡೆದು ನುಗ್ಗಿದೆ. ಕಾರ್ ಮುಂದಿನ ವಾಹನಗಳಿಗೆ ಡಿಕ್ಕಿ ಹೊಡೆದುಕೊಂಡು ಮತ್ತೊಂದು ಲಾರಿ ಅಡಿಗೆ ಸಿಲುಕಿದೆ.  ಕಾರ್ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದು ನಜ್ಜು ಗುಜ್ಜಾಗಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೂರು ಕಾರ್ ಗಳು, ಎರಡು ಲಾರಿ ಜಖಂಗೊಂಡಿವೆ. ಕಾರ್ ಬನ್ನೇರುಘಟ್ಟ ಮಾರ್ಗದಿಂದ ತುಮಕೂರು ಕಡೆಗೆ ಹೊರಟಿತ್ತು. ಮೃತರಲ್ಲಿ ಮೂವರನ್ನು ಕೇರಳ ಮೂಲದ ಶಿಲ್ಪಾ, ಮೊಹಮ್ಮದ್ ಫಾಸಿಲ್, ಅಭಿಲಾಷ್ ಎಂದು ಗುರುತಿಸಲಾಗಿದೆ. ಮತ್ತೊಂದು ಕಾರ್ ನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...