alex Certify ಬಂಧನ ಭೀತಿಯಲ್ಲಿದ್ದ ನಟಿ ಅಭಿನಯಗೆ ಬಿಗ್ ರಿಲೀಫ್: ಸುಪ್ರೀಂ ಕೋರ್ಟ್ ನಿಂದ ಜಾಮೀನು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧನ ಭೀತಿಯಲ್ಲಿದ್ದ ನಟಿ ಅಭಿನಯಗೆ ಬಿಗ್ ರಿಲೀಫ್: ಸುಪ್ರೀಂ ಕೋರ್ಟ್ ನಿಂದ ಜಾಮೀನು

ಬೆಂಗಳೂರು: ನಟಿ ಅಭಿನಯ ಕುಟುಂಬಕ್ಕೆ ಜೈಲು ಶಿಕ್ಷೆ ಪ್ರಕಟ ವಿಚಾರಕ್ಕೆ ಸಂಬಂಧಿಸಿದಂತೆ, ಅಭಿನಯ ಮತ್ತು ಕುಟುಂಬದ ಇಬ್ಬರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಅಭಿನಯ, ಅವರ ತಾಯಿ ಜಯಮ್ಮ ಮತ್ತು ಸಹೋದರ ಚೆಲುವರಾಜು ಅವರಿಗೆ ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಅವರು ತಲೆಮರೆಸಿಕೊಂಡಿದ್ದ ಹಿನ್ನಲೆಯಲ್ಲಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು.

ಜಾಮೀನು ಕೋರಿ ಅಭಿನಯ, ಕುಟುಂಬದವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮೂವರಿಗೂ ಸುಪ್ರೀಂಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ನೀಡಲಾಗಿದೆ. ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ ಅಭಿನಯ ಅತ್ತಿಗೆ ವರಲಕ್ಷ್ಮಿ ದೂರು ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...