alex Certify ಸ್ಪೂರ್ತಿದಾಯಕವಾಗಿದೆ ಈ ಮಹಿಳಾ ಪೊಲೀಸ್​ ಅಧಿಕಾರಿಯ ʼಯಶೋಗಾಥೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೂರ್ತಿದಾಯಕವಾಗಿದೆ ಈ ಮಹಿಳಾ ಪೊಲೀಸ್​ ಅಧಿಕಾರಿಯ ʼಯಶೋಗಾಥೆʼ

ಕುಟುಂಬಸ್ಥರ ವಿರೋಧದೊಂದಿಗೆ ಮದುವೆಯಾಗಿದ್ದರೂ ಸಹ ಕೇವಲ 18 ವರ್ಷಕ್ಕೇ ಪತಿ ಕೈಕೊಟ್ಟಿದ್ದ. ಪುಟ್ಟ ಮಗುವಿನೊಂದಿಗೆ ಮನೆಯಿಂದ ಹೊರನಡೆದ ಆನಿ ಶಿವ ಕೇರಳದ ವಾರ್ಕಳದಲ್ಲಿ ಐಸ್​ ಕ್ರೀಂ ಹಾಗೂ ನಿಂಬು ಪಾನಕಗಳನ್ನ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಳು.

ಆದರೆ ಈ ಯಾವುದೇ ಸವಾಲುಗಳು ಆಕೆಯ ಗುರಿಮುಟ್ಟುವ ಪ್ರಯತ್ನಕ್ಕೆ ತೊಡಕಾಗಲಿಲ್ಲ. ಸತತ ಪರಿಶ್ರಮದ ಬಳಿಕ ಇದೀಗ ಆಕೆ ಪೊಲೀಸ್​ ಇನ್​ಸ್ಪೆಕ್ಟರ್​ ಆಗಿ ನೇಮಕಗೊಂಡಿದ್ದಾರೆ.

ಆನಿ ಶಿವಗೆ ಶುಭಾಶಯ ಕೋರಿ ಟ್ವೀಟ್​ ಮಾಡಿರುವ ಕೇರಳ ಪೊಲೀಸ್​ ಇಲಾಖೆ, ಇಚ್ಛಾಶಕ್ತಿ ಹಾಗೂ ಆತ್ಮವಿಶ್ವಾಸಕ್ಕೆ ಇವರು ನಿಜವಾದ ಮಾದರಿ. ಕುಟುಂಬಸ್ಥರು ಹಾಗೂ ಪತಿಯಿಂದ ತ್ಯಜಿಸಲ್ಪಟ್ಟು ಆರು ತಿಂಗಳ ಮಗುವಿನ ಜೊತೆ ಬೀದಿಗೆ ಬಂದಿದ್ದ ಈ ಯುವತಿ ಇಂದು ಪೊಲೀಸ್​ ಠಾಣೆ ಸಬ್​ ಇನ್​ಸ್ಪೆಕ್ಟರ್​ ಆಗಿದ್ದಾರೆ ಎಂದು ಬರೆಯಲಾಗಿದೆ.

ಎಲ್ಲಾ ಅಡೆತಡೆಗಳನ್ನ ಎದುರಿಸಿ ಇದೀಗ ಆನಿ ಶಿವ ವಾರ್ಕಳ ಠಾಣೆಯಲ್ಲಿಯೇ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಆಗಿ ನೇಮಕಗೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನನಗೆ ನಾನು ವಾರ್ಕಳ ಠಾಣೆಯಲ್ಲಿಯೇ ಸೇವೆ ಸಲ್ಲಿಸಲಿದ್ದೇನೆ ಎಂಬ ವಿಚಾರ ತಿಳಿಯಿತು. ಪುಟ್ಟ ಕಂದಮ್ಮನನ್ನ ಹಿಡಿದು ನಾನು ಕಣ್ಣೀರು ಹಾಕುತ್ತಿದ್ದ ಸ್ಥಳವಿದು ಎಂದು ಶಿವಾ ಹೇಳಿದ್ದಾರೆ.

— Kerala Police (@TheKeralaPolice) June 27, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...