alex Certify ಈ ಮಾತು ಕೇಳುತ್ತಿದ್ದಂತೆ ಅಧಿಕಾರಿಯನ್ನು ತಬ್ಬಿಕೊಂಡ ಕೇಂದ್ರ ಸಚಿವ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಾತು ಕೇಳುತ್ತಿದ್ದಂತೆ ಅಧಿಕಾರಿಯನ್ನು ತಬ್ಬಿಕೊಂಡ ಕೇಂದ್ರ ಸಚಿವ….!

ದೆಹಲಿ: ಕೇಂದ್ರ ಸಂಪುಟ ಪುನಾರಚನೆ ನಂತರ ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಅಶ್ವಿನಿ ವೈಷ್ಣವ್ ಅವರು ಅಧಿಕಾರಿಯೊಬ್ಬರನ್ನು ತಬ್ಬಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಹೌದು, ಜುಲೈ 8ರಂದು ಕೇಂದ್ರ ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಅಶ್ವಿನಿ ವೈಷ್ಣವ್, ಭಾರತೀಯ ರೈಲ್ವೇ ಸಿಗ್ನಲ್ ವಿಭಾಗದ ಅಧಿಕಾರಿಯನ್ನು ತಬ್ಬಿಕೊಂಡಿದ್ದಾರೆ. ಅಧಿಕಾರಿಯು ತಾವು ವ್ಯಾಸಂಗ ಮಾಡಿದ್ದ ಜೋಧಪುರದ ಎಂಬಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡಿದವರು ಎಂದು ತಿಳಿದು ಬಂದ ಕೂಡಲೇ ಬಹಳ ಸಂತೋಷದಿಂದ ಅಧಿಕಾರಿ ಬಳಿ ತೆರಳಿ ತಬ್ಬಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯೂಟರ್ನ್: ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ

ಅಧಿಕಾರಿಯನ್ನು ಕಂಡಕೂಡಲೇ ‘ಓಹ್ ವ್ಹಾವ್….! ನೀವು ಅದು……ಬನ್ನಿ…..’ ಎಂದು ಹೇಳುತ್ತಲೇ ಆಲಂಗಿಸಿದರು. ಇನ್ನುಮುಂದೆ ತನ್ನನ್ನು ‘ಬಾಸ್’ ಎಂದು ಕರೆಯಬೇಕೆಂದು ಸಚಿವ ಅಶ್ವಿನಿ ವೈಷ್ಣವ್ ಅವರು ತಮಾಷೆಯಾಗಿ ಹೇಳಿದರು. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...