alex Certify ಕಾಕಿನಾಡಲ್ಲಿ ಬೀಡು ಬಿಟ್ಟ ಅಮೀರ್ ಖಾನ್: ನಟನ ನೋಡಲು ಮುಗಿಬಿದ್ದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಕಿನಾಡಲ್ಲಿ ಬೀಡು ಬಿಟ್ಟ ಅಮೀರ್ ಖಾನ್: ನಟನ ನೋಡಲು ಮುಗಿಬಿದ್ದ ಅಭಿಮಾನಿಗಳು

ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಮುಂಬರುವ ಹಿಂದಿ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ದ ಚಿತ್ರೀಕರಣಕ್ಕಾಗಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಬೀಡುಬಿಟ್ಟಿದ್ದಾರೆ.

ಅಮಲಾಪುರದಲ್ಲಿ ಕೆಲವು ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಲು ಅಮೀರ್ ಪೂರ್ವ ಗೋದಾವರಿ ಪಟ್ಟಣಕ್ಕೂ ತೆರಳಿದ್ದಾರೆ. ಚಿತ್ರ ತಂಡವು ಕಾಕಿನಾಡ ಮತ್ತು ಉಪ್ಪಡ ಬೀಚ್, ಒಡಲರೇವು ಬೀಚ್ ಮತ್ತು ಕಾಕಿನಾಡ ಬಂದರಿನಲ್ಲಿ ಕೆಲವು ಮಾಂಟೇಜ್ ಶಾಟ್‌ಗಳನ್ನು ಚಿತ್ರೀಕರಿಸಿದೆ ಎಂದು ವರದಿಯಾಗಿದೆ.

ಚಿತ್ರೀಕರಣದ ಸ್ಥಳಗಳು ಮತ್ತು ನಟನ ಆಗಮನದ ಬಗ್ಗೆ ಸುದ್ದಿ ಕಾಡ್ಗಿಚ್ಚಿನಂತೆ ಸುತ್ತಲೂ ಹರಡುತ್ತಿದ್ದಂತೆ, ಅಭಿಮಾನಿಗಳು ಕಾಕಿನಾಡದಲ್ಲಿರುವ ಅವರು ತಂಗಿದ್ದ ಹೋಟೆಲ್‌ನತ್ತ ಜಮಾಯಿಸಿದರು. ಹೀಗಾಗಿ ಹೋಟೆಲ್ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಯಿತು. ಏತನ್ಮಧ್ಯೆ, ನಟ ಸಹ ನಾಗಚೈತನ್ಯ ಮತ್ತು ತಂಡದ ಜೊತೆಯಿರುವ ಫೋಟೋ ಆನ್‌ಲೈನ್‌ನಲ್ಲಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಬ್ಬರು ಸೂಪರ್‌ಸ್ಟಾರ್‌ಗಳು ತಮ್ಮ ತಂಡದ ಸದಸ್ಯರೊಂದಿಗೆ ಆನಂದಿಸುತ್ತಿರುವ ದೃಶ್ಯ ಫೋಟೋದಲ್ಲಿ ಕಾಣಬಹುದಾಗಿದೆ.

ಕೊರೊನಾ ಸೋಂಕಿಗೊಳಗಾದವರು ಗುಣಮುಖರಾದ ನಂತರ ಲಸಿಕೆ ಪಡೆಯುವ ಕುರಿತು ಡಾ. ರಾಜು ಅವರಿಂದ ಮಹತ್ವದ ಮಾಹಿತಿ

ಲಾಲ್ ಸಿಂಗ್ ಚಡ್ಡಾ ಚಿತ್ರವು 1994ರ ಅಕಾಡೆಮಿ ಪ್ರಶಸ್ತಿ ವಿಜೇತ ಚಲನಚಿತ್ರ ‘ಫಾರೆಸ್ಟ್ ಗಂಪ್’ ನ ಭಾರತೀಯ ರೂಪಾಂತರವಾಗಿದೆ. ಈ ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಚಿತ್ರಕಥೆ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ 6 ಅಕಾಡೆಮಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಈ ಚಿತ್ರವನ್ನು ಮೂಲತಃ ಅದೇ ಹೆಸರಿನ 1986 ರ ‘ವಿನ್‌ಸ್ಟನ್ ಗ್ರೂಮ್’ ಕಾದಂಬರಿ ಆಧರಿಸಿ ಚಿತ್ರ ನಿರ್ಮಿಸಲಾಗಿತ್ತು.

‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರವನ್ನು ನಿರ್ದೇಶಿಸಿದ ಅದ್ವೈತ್ ಚಂದನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕರೀನಾ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರವು ಕ್ರಿಸ್ಮಸ್ ವೇಳೆ ಬಿಡುಗಡೆಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...