alex Certify 50 ರೂಪಾಯಿಗೆ ಪ್ಲಾಸ್ಟಿಕ್ ʼಆಧಾರ್ʼ ಪಡೆಯಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50 ರೂಪಾಯಿಗೆ ಪ್ಲಾಸ್ಟಿಕ್ ʼಆಧಾರ್ʼ ಪಡೆಯಲು ಇಲ್ಲಿದೆ ಮಾಹಿತಿ

ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡುವ ಎಲ್ಲಾ ಸೌಲಭ್ಯಕ್ಕೂ ಆಧಾರ್ ಕಾರ್ಡ್ ಬೇಕೇ ಬೇಕು ಎಂಬಂತಾಗುತ್ತಿದೆ.

ಹೆಚ್ಚಾಗಿ ಉಪಯೋಗಿಸಿ ಕಾಗದದಂತೆ ಇರುವ ಆಧಾರ್ ಕಾರ್ಡ್ ಹರಿದು ಹೋಗುವ ಭಯವೇ ? ಇಲ್ಲಿದೆ ನಿಮಗೊಂದು ಸಿಹಿ ಸುದ್ದಿ.

ಬಹುಪಯೋಗಿ ಆಧಾರ್ ಕಾರ್ಡನ್ನು ಈಗ ಚಿಕ್ಕದಾಗಿ, ಗಟ್ಟಿಯಾಗಿ ಹಾಗೂ ಎಲ್ಲಾ ಕಡೆ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಡಿಸೈನ್ ಮಾಡಲಾಗಿದೆ. ಆಧಾರ್ ಮಾಹಿತಿಯನ್ನು ಎಟಿಎಂ ಕಾರ್ಡಿನಂತೆ ಕಾಣುವ ಪ್ಲಾಸ್ಟಿಕ್ ಆಧಾರಿತ ಶೀಟ್ ಮೇಲೆ ಆಧಾರ್ ಮಾಹಿತಿಯನ್ನು ಮುದ್ರಿಸಲಾಗುತ್ತಿದೆ. ಈ ಚಿಕ್ಕ ಕಾರ್ಡಿನಲ್ಲಿ ಬೇಕಾಗಿರುವ ಎಲ್ಲಾ ಮಾಹಿತಿಗಳನ್ನು ಮುದ್ರಿಸಲಾಗುತ್ತದೆ.

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಈ ವಿಡಿಯೋ

ಹೆಸರು, 12 ಸಂಖ್ಯೆಯಿರುವ ಆಧಾರ್ ಸಂಖ್ಯೆ, ವಿಳಾಸ ಮತ್ತು ಭಾವಚಿತ್ರ ಇರುತ್ತದೆ. ಇದನ್ನು ಕೇವಲ ಐವತ್ತು ರೂಪಾಯಿ ಪಾವತಿಸಿ ಪಡೆಯಬಹುದಾಗಿದೆ.

ಇದನ್ನು ಪಡೆಯಬೇಕೆ ? ಇಲ್ಲಿ ನೋಡಿ

* ಮೊದಲಿಗೆ https://uidai.gov.in/ ಇಲ್ಲಿಗೆ ಹೋಗಿ

* ಮೈ ಆಧಾರ್ ಎಂಬ ಮಾಹಿತಿ ಇರುವಲ್ಲಿಗೆ ಹೋಗಿ, ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ

* ನಿಮ್ಮ 12 ಸಂಖ್ಯೆಯಿರುವ ಆಧಾರ್ ಸಂಖ್ಯೆ ನಮೂದಿಸಿ

* ಒಟಿಪಿ ಸಂಖ್ಯೆ ನಿಮ್ಮ ಮೊಬೈಲಿಗೆ ಬರುತ್ತದೆ, ಪರಿಶೀಲಿಸಿ

* ಪರಿಶೀಲಿಸಿದ ನಂತರ ನಿಮ್ಮ ಆಧಾರ್ ಮಾಹಿತಿ ಸ್ಕ್ರೀನ್ ಮೇಲೆ ಕಾಣುತ್ತದೆ

* 50 ರೂಪಾಯಿ ಪಾವತಿಸಿ ಮತ್ತು ಇದರ ಪ್ರಕ್ರಿಯೆ ಪೂರ್ಣಗೊಳಿಸಿ

* ನಿಮ್ಮ ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ಮೂಲಕ ನಿಮಗೆ ತಲುಪಿಸಲಾಗುವುದು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...