alex Certify ಹಡಗುಗಳಿಗೂ ಇದೆ ಸ್ಮಶಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಡಗುಗಳಿಗೂ ಇದೆ ಸ್ಮಶಾನ….!

ಹಡಗುಗಳಿಗೆ ಸ್ಮಶಾನವಿದೆ ಎಂದು ತಿಳಿದಿದೆಯೇ?
ಇತ್ತೀಚೆಗೆ, ಹಡಗುಗಳ ಸ್ಮಶಾನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಐದು ದೊಡ್ಡ ಹಡಗುಗಳು ಸಮುದ್ರ ತೀರದಲ್ಲಿ ನಿಂತಿರುವುದು ಕಾಣಬಹುದು.

ಈ ಹಡಗುಗಳು ಸ್ಪಷ್ಟವಾಗಿ ಶಿಥಿಲಾವಸ್ಥೆಯಲ್ಲಿರುವಂತೆ ಕಾಣಿಸುತ್ತದೆ. ಅವುಗಳ ನಡುವೆ ಎರಡು ಬಿಳಿ ಕ್ರೂಸ್​ಗಳು ಉತ್ತಮ ಆಕಾರದಲ್ಲಿ ಕಾಣುತ್ತಿದ್ದರೂ, ಅವುಗಳನ್ನು ಸಹ ಅಲ್ಲಿ ನಿಲ್ಲಿಸಲಾಗಿದೆ.

ಚಿತ್ರವು ಟರ್ಕಿಯ ಅಲಿಯಾಗಾದಲ್ಲಿ ವಿಶ್ವದ ಪ್ರಸಿದ್ಧ ಹಡಗು ಡಂಪ್​ ಯಾರ್ಡ್​ನದ್ದಾಗಿದೆ.

ವಾಸ್ತವವಾಗಿ, ಹಡಗುಗಳನ್ನು 10ರಿಂದ 15 ವರ್ಷಗಳ ಬಳಕೆಯ ನಂತರ ಡಂಪ್​ ಯಾರ್ಡ್​ಗೆ ತಳ್ಳಲಾಗುತ್ತದೆ. ನಂತರ ಅವುಗಳನ್ನು ಡಿಸ್​ ಮ್ಯಾಂಟಲ್​ ಮಾಡಲು 2500 ಕ್ಕೂ ಹೆಚ್ಚು ಕೆಲಸಗಾರರು ಒಟ್ಟಾಗಿ ಸೇರುತ್ತಾರೆ.

ಯಂತ್ರಗಳು, ಎಂಜಿನ್​ಗಳು ಮತ್ತು ಉಕ್ಕು ಮತ್ತು ಅಲ್ಯೂಮಿನಿಯಂನಂತಹ ಕೆಲವು ಲೋಹಗಳು ಸೇರಿದಂತೆ ವಿವಿಧ ಅಂಶಗಳಿಂದ ಹಡಗುಗಳನ್ನು ತಯಾರಿಸಲಾಗಿರುತ್ತದೆ. ಹೀಗಾಗಿ ಇಲ್ಲಿನ ಅನೇಕ ವಸ್ತುಗಳನ್ನು ಇತರ ಹಡಗುಗಳನ್ನು ನಿರ್ಮಿಸಲು ಮರುಬಳಕೆ ಮಾಡಬಹುದು.

ಹಡಗು ಒಡೆಯುವವರಿಗೆ ನಿಜವಾದ ಸವಾಲು ಕ್ರೂಸ್​ನದ್ದಾಗಿರುತ್ತದೆ. ಕ್ರೂಸ್​ಗಳು ನೂರಾರು ಕೊಠಡಿಗಳು, ಸ್ಪಾಗಳು, ಪಬ್​ಗಳು, ಡೈನಿಂಗ್​ ಹಾಲ್​ಗಳು ಮತ್ತು ದೃಶ್ಯವಿಕ್ಷಣೆಯ ಸ್ಥಳಗಳಂತಹ ವಿವಿಧ ಸೌಲಭ್ಯ ಇರುತ್ತವೆ. ಜೊತೆಗೆ ಅನೇಕ ಇತರ ಸೌಕರ್ಯಗಳನ್ನು ನೀಡುತ್ತವೆ. ಅಂತಹ ಕೊಠಡಿಗಳು ಮತ್ತು ಸ್ಥಳಗಳನ್ನು ಒಡೆಯುವುದು ಈ ಕಾರ್ಮಿಕರಿಗೆ ಸವಾಲಾಗಿರುತ್ತದೆ. ಸರಕು ಸಾಗಣೆ ಹಡಗಿಗೆ ಹೋಲಿಸಿದರೆ ಕ್ರೂಸ್​ ಕಿತ್ತುಹಾಕಲು ಎರಡು ಪಟ್ಟು ಸಮಯವನ್ನು ತೆಗೆದುಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...