alex Certify ವ್ಯಕ್ತಿಯೊಬ್ಬನ ಬಳಿ ನುಸುಳಿದ ಸರ್ಪ: ಮೈ ಜುಮ್ಮೆನ್ನುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಯೊಬ್ಬನ ಬಳಿ ನುಸುಳಿದ ಸರ್ಪ: ಮೈ ಜುಮ್ಮೆನ್ನುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

Gippslands Malcolm had an unexpected encounter on his deck  Image Redditವಿಶ್ವದ ಕೆಲವು ಮಾರಣಾಂತಿಕ ಪ್ರಾಣಿಗಳಿಗೆ, ಅದರಲ್ಲೂ ವಿಶೇಷವಾಗಿ ವಿಶ್ವದ ಟಾಪ್ 10 ಅತ್ಯಂತ ವಿಷಕಾರಿ ಹಾವುಗಳಿರುವ ಪ್ರದೇಶ ಎಂಬುದಾಗಿ ಆಸ್ಟ್ರೇಲಿಯಾ ಖ್ಯಾತಿಯನ್ನು ಹೊಂದಿದೆ. ಆಸ್ಟ್ರೇಲಿಯನ್ನರು ಸ್ವತಃ ಈ ಉರಗದ ಬಗ್ಗೆ ಭಯಪಡುತ್ತಾರೆ.

ಆಸೀಸ್ ನಲ್ಲಿ ಹಾವುಗಳು ಹೆಚ್ಚಾಗಿರುವುದರಿಂದ ಎಲ್ಲೆಂದರಲ್ಲಿ ಕಂಡುಬರುತ್ತವೆ. ಇದೀಗ ವ್ಯಕ್ತಿಯೊಬ್ಬನ ಮನೆಗೆ ಹಾವು ನುಗ್ಗಿರುವ ವಿಡಿಯೋವೊಂದು ವೈರಲ್ ಆಗಿದೆ. ಇದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾಲ್ಕಮ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ತಮ್ಮ ಮೇಜಿನ ಬಳಿ ಕುರ್ಚಿಯ ಮೇಲೆ ಕುಳಿತಿರುವುದನ್ನು ದೃಶ್ಯಾವಳಿಗಳಲ್ಲಿ ನೋಡಬಹುದು.

ಈ ವೇಳೆ ಅವರ ಹಿಂದೆಯೇ ಹಾವು ಕಾಣಿಸಿಕೊಂಡಿದೆ. ಆದರೆ, ಅವರಿಗೆ ಮಾತ್ರ ಅರಿವಾಗಿಲ್ಲ. ಹಾವು ವ್ಯಕ್ತಿಯ ಕಾಲ ಬಳಿ ಬರುತ್ತಿದ್ದಂತೆ ಅವರ ಪಾದದ ಮೇಲೆ ನೆಗೆಯಲು ಪ್ರಯತ್ನಿಸಿದೆ. ಈ ವೇಳೆ ಅವರು ಭಯ ಬಿದ್ದಿದ್ದಾರೆ. ಕೂಡಲೇ ಕುರ್ಚಿಯನ್ನು ದೂರ ತಳ್ಳಿದ್ದಾರೆ. ಹಾವು ಕೂಡ ಭಯಪಟ್ಟಂತೆ ಅಲ್ಲಿಂದ ಓಡಿ ಹೋಗಿದೆ. ಬದುಕಿದೆಯಾ ಬಡಜೀವವೆ ಎಂಬಂತೆ ಅವರು ನಿಟ್ಟುಸಿರುಬಿಟ್ಟಿದ್ದಾರೆ.

ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿದೆ. ನೆಟ್ಟಿಗರು ತಮಾಷೆಯಾಗಿ, ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...