alex Certify ಬುಧವಾರ ಮಗಳನ್ನು ತವರಿನಿಂದ ಬೀಳ್ಕೊಡಬಾರದು; ಈ ನಂಬಿಕೆಯ ಹಿಂದಿದೆ ʼಪೌರಾಣಿಕʼ ಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುಧವಾರ ಮಗಳನ್ನು ತವರಿನಿಂದ ಬೀಳ್ಕೊಡಬಾರದು; ಈ ನಂಬಿಕೆಯ ಹಿಂದಿದೆ ʼಪೌರಾಣಿಕʼ ಕಾರಣ…!

ಬುಧವು ಬುದ್ಧಿಮತ್ತೆಯನ್ನು ಒದಗಿಸುವ ಗ್ರಹ. ಅನೇಕರು ಬುಧನ ಅನುಗ್ರಹಕ್ಕಾಗಿ ಬುಧವಾರ ಉಪವಾಸ ಮಾಡುತ್ತಾರೆ. ಬುಧನ ಆರಾಧನೆಗೆ ಬಿಳಿ ಹೂವುಗಳು ಮತ್ತು ಶ್ರೀಗಂಧ ಅತ್ಯಂತ ಶ್ರೇಷ್ಠ. ಈ ಉಪವಾಸದ ಸಮಯದಲ್ಲಿ ಹಸಿರು ವಸ್ತುಗಳನ್ನು ಬಳಸುವುದು ಉತ್ತಮ.

ಉಪವಾಸದ ಕೊನೆಯಲ್ಲಿ ಶಿವನನ್ನು ಧೂಪ, ದೀಪ, ಬಿಲ್ವಪತ್ರೆಯಿಂದ ಪೂಜಿಸಲಾಗುತ್ತದೆ. ಬುಧವಾರದ ಉಪವಾಸದಲ್ಲಿ ಕಥೆಯನ್ನು ಕೇಳಿದ  ಅಥವಾ ಓದಿದ ನಂತರ ಪ್ರಸಾದವನ್ನು ತೆಗೆದುಕೊಂಡ ಬಳಿಕವೇ ಆಹಾರ ಸೇವಿಸಲಾಗುತ್ತದೆ. ನಂತರವೇ ಉಪವಾಸವನ್ನು ಮುರಿಯಲಾಗುತ್ತದೆ. ಮನೆಮಗಳನ್ನು ಬುಧವಾರ ತವರಿನಿಂದ ಗಂಡನ ಮನೆಗೆ ಕಳುಹಿಸಬಾರದೆಂಬ ನಂಬಿಕೆಯಿದೆ. ಇದರ ಹಿಂದೆ ಬುಧನಿಗೆ ಸಂಬಂಧಪಟ್ಟ ಕಥೆಯಿದೆ.

ಪ್ರಾಚೀನ ಕಾಲದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಬೀಳ್ಕೊಡಲು ಅತ್ತೆಯ ಮನೆಗೆ ಹೋಗಿದ್ದ. ಕೆಲವು ದಿನಗಳ ಕಾಲ ಅಲ್ಲಿಯೇ ಉಳಿದುಕೊಂಡು, ಬುಧವಾರ ಪತ್ನಿಯನ್ನು ತನ್ನೊಡನೆ ಕಳಿಸುವಂತೆ ಅತ್ತೆಯನ್ನು ಕೇಳಿದ. ಆದರೆ ಬುಧವಾರ ಎಂಬ ಕಾರಣಕ್ಕೆ ಅವರು ಮಗಳನ್ನು ಕಳಿಸಿಕೊಡಲು ಒಪ್ಪಲಿಲ್ಲ. ಆದರೂ ಹಠ ಬಿಡದ ಆತ ಹೆಂಡತಿಯನ್ನು ಕರೆದೊಯ್ದ. ದಾರಿಯಲ್ಲಿ ಅವನ ಹೆಂಡತಿಗೆ ತುಂಬಾ ಬಾಯಾರಿಕೆಯಾಯಿತು, ಆತ ನೀರು ತರಲು ತೆರಳಿದ. ಮರಳಿ ಬರುವಷ್ಟರಲ್ಲಿ ಆತನ ಪತ್ನಿಯ ಪಕ್ಕದಲ್ಲಿ ಅವನಂತೆಯೇ ಕಾಣುವ ಇನ್ನೊಬ್ಬ ವ್ಯಕ್ತಿ ಕುಳಿತಿದ್ದ.

ನೀನ್ಯಾರು ? ನನ್ನ ಪತ್ನಿಯ ಪಕ್ಕದಲ್ಲಿ ಏಕೆ ಕುಳಿತಿದ್ದೀಯಾ ಎಂದು ಕೋಪದಿಂದ ಕೇಳಿ. ಅದಕ್ಕೆ ಉತ್ತರಿಸಿದ ಆತ ಇವಳು ನನ್ನ ಹೆಂಡತಿ, ನೀನ್ಯಾರು ಎಂದ. ಇಬ್ಬರಿಗೂ ಇದೇ ವಿಚಾರಕ್ಕೆ ಜಗಳ ಶುರುವಾಯಿತು. ಪ್ರಕರಣ ವಿವಾದಕ್ಕೆ ಕಾರಣವಾಯ್ತು. ತನ್ನ ಪತಿ ಯಾರು ಎಂಬುದು ಗೊತ್ತಾಗದೇ ಆ ಮಹಿಳೆ ತಬ್ಬಿಬ್ಬಾದಳು.

ಮಹಿಳೆಯ ನಿಜವಾದ ಪತಿ, ದೇವರನ್ನು ಪ್ರಾರ್ಥಿಸಲು ಪ್ರಾರಂಭಿಸಿದ. ಆಗ ಆಕಾಶದಿಂದ ಒಂದು ಧ್ವನಿ ಬಂದಿತು. ಬುಧವಾರ ನೀನು ಯಾರ ಮಾತನ್ನೂ ಕೇಳಲಿಲ್ಲ, ಆದ್ದರಿಂದಲೇ ಹೀಗಾಯಿತು. ಇದೆಲ್ಲವೂ ಬುಧದೇವನ ಆಟವೆಂದು ಆ ಧ್ವನಿ ಹೇಳಿತ್ತು. ತನ್ನ ತಪ್ಪಿನ ಅರಿವಾದ ಬಳಿಕ ಆ ವ್ಯಕ್ತಿ ಬುಧದೇವನ ಬಳಿ ಕ್ಷಮೆ ಕೇಳಿದ.

ಮಹಿಳೆಯ ಪತಿಯ ರೂಪದಲ್ಲಿ ಬಂದಿದ್ದ ಬುಧದೇವ ಆಗ ಮಾಯವಾಗುತ್ತಾನೆ. ಬಳಿಕ ಆ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಮನೆಗೆ ಬಂದು ಬುಧವಾರ ನಿಯಮಿತವಾಗಿ ಉಪವಾಸವನ್ನು ಪ್ರಾರಂಭಿಸಿದನು. ಬುಧವಾರದಂದು ಈ ಕಥೆಯನ್ನು ಕೇಳುವ ಮತ್ತು ಹೇಳುವ ವ್ಯಕ್ತಿಗಳು ಪುಣ್ಯ ಸಂಪಾದನೆ ಮಾಡುತ್ತಾರೆ. ಎಲ್ಲ ರೀತಿಯಲ್ಲೂ ಸಂತೋಷವನ್ನು ಅನುಭವಿಸುತ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...