alex Certify CAT 2021: 9 ಅಭ್ಯರ್ಥಿಗಳಿಗೆ ಶೇ. 100 ರಷ್ಟು ಅಂಕ, ಸತತ 4 ನೇ ವರ್ಷವೂ ಹುಡುಗರೇ ಟಾಪರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

CAT 2021: 9 ಅಭ್ಯರ್ಥಿಗಳಿಗೆ ಶೇ. 100 ರಷ್ಟು ಅಂಕ, ಸತತ 4 ನೇ ವರ್ಷವೂ ಹುಡುಗರೇ ಟಾಪರ್

ನವದೆಹಲಿ: CAT 2021 ರಲ್ಲಿ 9 ಅಭ್ಯರ್ಥಿಗಳು ಒಟ್ಟಾರೆ ಶೇಕಡ 100 ರಷ್ಟು ಅಂಕ ಗಳಿಸಿದ್ದಾರೆ. ನಾಲ್ಕನೇ ವರ್ಷವೂ ಅತಿ ಹೆಚ್ಚು ಅಂಕ ಪಡೆದ ಎಲ್ಲಾ ಅಭ್ಯರ್ಥಿಗಳು ಪುರುಷರಾಗಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆ(CAT) 2021 ರಲ್ಲಿ ಅಗ್ರಸ್ಥಾನದಲ್ಲಿದೆ ಎಂದು IIM ಅಹಮದಾಬಾದ್ ಪ್ರಕಟಿಸಿದ ಫಲಿತಾಂಶಗಳನ್ನು ಸಂಘಟನಾ ಸಂಸ್ಥೆ ಬಹಿರಂಗಪಡಿಸಿದೆ.

ಟಾಪರ್‌ಗಳಲ್ಲಿ 7 ಮಂದಿ ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರು. ಇಬ್ಬರು ಇಂಜಿನಿಯರಿಂಗ್ ಓದಿಲ್ಲದವರಾಗಿದ್ದಾರೆ ಎಂದು 2021 ರ ಸಿಎಟಿ ಕನ್ವೀನರ್ ಎಂ.ಪಿ. ರಾಮ್ ಮೋಹನ್ ಅವರು ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಅತಿ ಹೆಚ್ಚು 100 ಪರ್ಸೆಂಟೈಲರ್‌ ಗಳು ಅಂದರೆ ನಾಲ್ಕು ಹೊಂದಿದೆ, ಉತ್ತರ ಪ್ರದೇಶ 2 ಮತ್ತು ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತೆಲಂಗಾಣದಿಂದ ತಲಾ ಒಬ್ಬರು ಶೇ. 100 ಅಂಕ ಪಡೆದವರಿದ್ದಾರೆ.

CAT 2021 ಕ್ಕೆ ಹಾಜರಾದ 1.92 ಲಕ್ಷ ಅಭ್ಯರ್ಥಿಗಳಲ್ಲಿ ಸುಮಾರು ಶೇ. 35 ರಷ್ಟು ಮಹಿಳೆಯರು ಇದ್ದರೂ, ಅವರಲ್ಲಿ ಯಾರೂ 100 ಪರ್ಸೆಂಟೈಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. CAT 2017 ರಲ್ಲಿ 20 ಟಾಪರ್‌ಗಳಲ್ಲಿ ಇಬ್ಬರು ಮಹಿಳೆಯರು ಮತ್ತು ಮೂವರು ಇಂಜಿನಿಯರ್ ಅಲ್ಲದವರು ಕೊನೆಯ ಬಾರಿಗೆ ಸ್ಥಾನ ಪಡೆದಿದ್ದರು.

19 ಅಭ್ಯರ್ಥಿಗಳು CAT 2021 ರಲ್ಲಿ ಒಟ್ಟಾರೆ 99.99 ಶೇಕಡಾವನ್ನು ಗಳಿಸಿದ್ದಾರೆ. ಇವರೆಲ್ಲರೂ ಪುರುಷ ಅಭ್ಯರ್ಥಿಗಳಾಗಿದ್ದಾರೆ. 19 ಅಭ್ಯರ್ಥಿಗಳಲ್ಲಿ 16 ಅಭ್ಯರ್ಥಿಗಳು ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರಾಗಿದ್ದಾರೆ.

19 ಅಭ್ಯರ್ಥಿಗಳ ಪೈಕಿ ಒಬ್ಬ ಮಹಿಳಾ ಇಂಜಿನಿಯರ್ ಇದ್ದಾರೆ.  ಅವರಲ್ಲಿ 15 ಮಂದಿ ಇಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರಗಿದ್ದು, ಅವರು ಒಟ್ಟಾರೆ ಶೇ. 99.98 ರಷ್ಟು ಅಂಕ ಗಳಿಸಿದ್ದಾರೆ.

CAT 2021 ಅನ್ನು ನವೆಂಬರ್ 28, 2021 ರಂದು ಮೂರು ಪಾಳಿಗಳಲ್ಲಿ ಭಾರತದ 156 ನಗರಗಳಲ್ಲಿ 438 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು.

IIM ಗಳು ಈಗ CAT 2021 ಸ್ಕೋರ್‌ಗಳ ಆಧಾರದ ಮೇಲೆ ನಂತರದ ಪ್ರವೇಶ ಪ್ರಕ್ರಿಯೆಗಳಿಗಾಗಿ ತಮ್ಮ ಕಿರುಪಟ್ಟಿಗಳನ್ನು ಬಿಡುಗಡೆ ಮಾಡುತ್ತವೆ.

88 ಐಐಎಂ ಅಲ್ಲದ ಸಂಸ್ಥೆಗಳು ತಮ್ಮ ನಿರ್ವಹಣಾ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಈ ವರ್ಷ CAT 2021 ಸ್ಕೋರ್‌ಗಳನ್ನು ಬಳಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...