alex Certify 9 ತಿಂಗಳಲ್ಲಿ ಬರೋಬ್ಬರಿ 80 ಕೋಟಿ ರೂಪಾಯಿ ದಂಡ ಸಂಗ್ರಹಿಸಿದ ಪಶ್ಚಿಮ ರೈಲ್ವೆ ಇಲಾಖೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9 ತಿಂಗಳಲ್ಲಿ ಬರೋಬ್ಬರಿ 80 ಕೋಟಿ ರೂಪಾಯಿ ದಂಡ ಸಂಗ್ರಹಿಸಿದ ಪಶ್ಚಿಮ ರೈಲ್ವೆ ಇಲಾಖೆ…..!

ಪಶ್ಚಿಮ ರೈಲ್ವೆ ಇಲಾಖೆಯು ಟಿಕೆಟ್​ ರಹಿತ ಪ್ರಯಾಣ ಮಾಡಿದವರಿಂದ ಈವರೆಗೆ 80.07 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಈ ವರ್ಷದ ಜನವರಿವರೆಗೆ ಮಾಸ್ಕ್​ ಇಲ್ಲದೇ ಪ್ರಯಾಣ ಬೆಳೆಸಿದವರ ವಿರುದ್ಧ ದಂಡದ ರೂಪದಲ್ಲಿ 26.92 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ.

ಏಪ್ರಿಲ್​ 2021ರಿಂದ ಜನವರಿ 2022ರವರೆಗೆ ನಡೆಸಲಾದ ತಪಾಸಣೆಗಳಲ್ಲಿ ಬುಕ್​ ಮಾಡದ ಲಗೇಜ್​ ಪ್ರಕರಣಗಳು ಸೇರಿದಂತೆ ಸುಮಾರು 13.67 ಲಕ್ಷ ರೂಪಾಯಿಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಒಟ್ಟು 80.07 ಕೋಟಿ ರೂಪಾಯಿಗಳನ್ನು ಪಶ್ಚಿಮ ರೈಲ್ವೆಯು ವಸೂಲಿ ಮಾಡಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮೀತ್​ ಠಾಕೂರ್​ ಹೇಳಿದ್ದಾರೆ.

ಈ ಅವಧಿಯಲ್ಲಿ ಕಾಯ್ದಿರಿಸಲಾದ ಟಿಕೆಟ್​ಗಳ ವರ್ಗಾವಣೆಯ 9 ಪ್ರಕರಣಗಳು ವರದಿಯಾಗಿದೆ. ಇದು ಮಾತ್ರವಲ್ಲದೇ 540 ಭಿಕ್ಷುಕರು, 613 ಅನಧಿಕೃತ ಬೀದಿ ಬದಿ ವ್ಯಾಪಾರಿಗಳನ್ನು ಬಂಧಿಸಲಾಗಿದೆ. 369 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆಯು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...