alex Certify ಲಾಟರಿಯಲ್ಲಿ ಗೆದ್ದ ದುಡ್ಡಿನ ಅರ್ಧ ಭಾಗ ಟಿಕೆಟ್ ಮಾರಿದಾತನಿಗೆ ಕೊಟ್ಟ ಹಿರಿಯ ಜೀವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಟರಿಯಲ್ಲಿ ಗೆದ್ದ ದುಡ್ಡಿನ ಅರ್ಧ ಭಾಗ ಟಿಕೆಟ್ ಮಾರಿದಾತನಿಗೆ ಕೊಟ್ಟ ಹಿರಿಯ ಜೀವ

ಲಾಟರಿ ಗೆಲ್ಲುವುದು ಎಂದರೆ ಜೀವಮಾನದ ಅದೃಷ್ಟ ಬೇಕಾಗಿರುವ ಒಂದು ವಿಚಾರ. ಅಂಥದ್ದರಲ್ಲಿ, $300 ಲಾಟರಿಯೊಂದನ್ನು ಗೆದ್ದ 86 ವರ್ಷದ ಮಹಿಳೆಯೊಬ್ಬರು ಬಹುಮಾನದ ದುಡ್ಡನ್ನು ತಮಗೆ ಲಾಟರಿ ಟಿಕೆಟ್ ಮಾರಿದಾತನೊಂದಿಗೆ ಹಂಚಿಕೊಂಡಿದ್ದಾರೆ.

ಮಾರಿಯಾನ್ ಫಾರೆಸ್ಟ್ ಹೆಸರಿನ ಈ ಮಹಿಳೆಗೆ ಫ್ಯಾಂಟಸಿ 5 ಲೋಟೋ ಟಿಕೆಟ್‌ ಅನ್ನು ಡೂಕ್ಸ್‌ ಮಿನಿ ಮಾರ್ಕ್ ಎಂಬಲ್ಲಿ ಖರೀದಿಸಿದ್ದರು. ಅಲ್ಲಿದ್ದ ಕ್ಯಾಶಿಯರ್‌ ವಾಲ್ಟರ್‌ ಅವರು ಲಾಟರಿ ಟಿಕೆಟ್ ಖರೀದಿಸುವಂತೆ ಮಾರಿಯಾನ್‌ರನ್ನು ಮನವಿ ಮಾಡಿಕೊಂಡಿದ್ದರು. ಲಾಟರಿ ಬಹುಮಾನ $500,000 ಎಂದು ವಾಲ್ಟರ್‌ ಮಾರಿಯಾನ್‌ಗೆ ತಿಳಿಸಿದ ವೇಳೆ, ತಾನೇನಾದರೂ ಲಾಟರಿ ಗೆದ್ದರೆ “ಆತನನ್ನು ನೋಡಿಕೊಳ್ಳುವೆ” ಎಂದಿದ್ದರು.

ಧನ್ ತೇರಸ್ ದಿನ ಈ ವಸ್ತುಗಳನ್ನು ಖರೀದಿಸಬೇಡಿ

ಜಾಕ್‌ಪಾಟ್ ಗೆಲ್ಲದೇ ಇದ್ದರೂ $300 ಗೆದ್ದ ಮಾರಿಯಾನ್ ತಮ್ಮ ಮಾತನ್ನು ಉಳಿಸಿಕೊಂಡು ವಾಲ್ಟರ್‌ಗೆ $150 ಕೊಟ್ಟಿದ್ದಾರೆ. ಎನ್ವಲಪ್‌ ಒಂದರ ಜೊತೆಗೆ ಸ್ಟೋರ್‌ಗೆ ಆಗಮಿಸಿದ ಮಾರಿಯಾನ್‌, ಆತನಿಗೆ ಬಹುಮಾನದ ಅರ್ಧ ದುಡ್ಡನ್ನು ಬಹಳ ಸುಂದರವಾಗಿ ಪ್ರೆಸೆಂಟ್ ಮಾಡಿ ಕೊಟ್ಟಿದ್ದಾರೆ.

ಈ ಸೂಪರ್‌ ಸ್ವೀಟ್ ಕ್ಷಣವನ್ನು ಅಂಗಡಿಯಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಆನ್ಲೈನ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವಾಲ್ಟೆರ್‌ ಹಾಗೂ ಮಾರಿಯಾನ್ ಪರಸ್ಪರ ಆಲಂಗಿಸಿಕೊಂಡು ಈ ಸಂಭ್ರಮ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...