alex Certify ’83’ ಓಟಿಟಿ ಪ್ಲಾಟ್‌ ಫಾರಂನಲ್ಲಿ ರಿಲೀಸ್‌ ಆಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’83’ ಓಟಿಟಿ ಪ್ಲಾಟ್‌ ಫಾರಂನಲ್ಲಿ ರಿಲೀಸ್‌ ಆಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ

1983ರ ವಿಶ್ವಕಪ್ ಕ್ರಿಕೆಟ್‌ ವಿಜೇತ ತಂಡದ ನಾಯಕ ಕಪಿಲ್ ದೇವ್‌ ಜೀವನಾಧರಿತ ಚಿತ್ರ ’83’, ಕೋವಿಡ್ ಕಾಟದಿಂದಾಗಿ ಓಟಿಟಿ ಪ್ಲಾಟ್‌ಫಾರಂಗಳಲ್ಲಿ ಬಿತ್ತರವಾಗಲಿದೆ ಎಂಬ ವದಂತಿಗಳು ಜೋರಾಗಿದ್ದವು.

ರಣವೀರ್‌ ಸಿಂಗ್‌ರನ್ನು ಕಪಿಲ್ ದೇವ್‌ ಪಾತ್ರದಲ್ಲಿ ತೋರಲಾಗಿರುವ ಈ ಚಿತ್ರವು ಡಿಸೆಂಬರ್‌ 24ರಂದು ಬಿಡುಗಡೆಯಾಗಿದೆ. ಭಾರೀ ಮೆಚ್ಚುಗೆ ಕೇಳಿ ಬಂದರೂ ಸಹ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಿಲ್ಲ 83.

BIG BREAKING: ರಾಜ್ಯದ 5 ಜಿಲ್ಲೆಗಳಲ್ಲಿ ಒಮಿಕ್ರಾನ್ ಕಂಟಕ; ಲಸಿಕೆ ಪಡೆಯದಿದ್ದರೆ ಜೀವಕ್ಕೆ ಅಪಾಯ; ಸಚಿವ ಸುಧಾಕರ್ ಎಚ್ಚರಿಕೆ

ಒಮಿಕ್ರಾನ್ ಕಾಟದಿಂದ ದೇಶದಲ್ಲೇನಾದರೂ ಇನ್ನೊಂದು ಲಾಕ್‌ಡೌನ್‌ ಆದರೆ ರಿಲಾಯನ್ಸ್ ಎಂಟರ್ಟೇನ್ಮೆಂಟ್ ಮತ್ತು ಫ್ಯಾಂಟಂ ಫಿಲ್ಮ್ಸ್‌ ’83’ಯನ್ನು ಓಟಿಟಿ ಪ್ಲಾಟ್‌ಫಾರಂನಲ್ಲಿ ಬಿತ್ತರಿಸಲಿದ್ದಾರೆ ಎಂಬ ಗುಮಾನಿಗಳು ಕೇಳಿ ಬಂದಿದ್ದವು.

ಆದರೆ ಈ ಕುರಿತು ಸ್ಪಷ್ಟನೆ ಕೊಟ್ಟಿರುವ ರಿಲಾಯನ್ಸ್‌ ಎಂಟರ್ಟೇನ್ಮೆಂಟ್‌‌ನ ಶಿಬಶಿಶ್ ಸರ್ಕಾರ್‌‌, “83 ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕನಿಷ್ಠ 8 ವಾರಗಳ ಬಳಿಕ ಮಾತ್ರವೇ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಬಿಡುಗಡೆ ಮಾಡಲಾಗುವುದು” ಎಂದಿದ್ದಾರೆ.

ಏಕಕಾಲದಲ್ಲಿ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿರುವ ’83’ ದೇಶೀ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್‌ನತ್ತ ದಾಪುಗಾಲಿಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...