alex Certify ‘83’ ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಿಸಿದ ದೆಹಲಿ ಸರ್ಕಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘83’ ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಿಸಿದ ದೆಹಲಿ ಸರ್ಕಾರ..!

ಬಾಲಿವುಡ್​ ನಟ ರಣವೀರ್​ ಸಿಂಗ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 83 ರಿಲೀಸ್​ಗೆ ಇನ್ನೇನು ಎರಡು ದಿನ ಮಾತ್ರ ಬಾಕಿ ಉಳಿದಿದೆ. ಕಬೀರ್ ಖಾನ್​ ಹೂಡಿಕೆ ಮಾಡಿರುವ ಈ ಸಿನಿಮಾವನ್ನು ದೆಹಲಿಯಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್​ಸ್ಟಾಗ್ರಾಂ ನಲ್ಲಿ ಖುದ್ದು ಈ ವಿಚಾರವನ್ನು ಹಂಚಿಕೊಂಡಿರುವ ನಿರ್ಮಾಪಕ ಕಬೀರ್ ಖಾನ್​, 83 ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ರಿಗೆ ಧನ್ಯವಾದಗಳು. ನಿಮ್ಮ ಈ ನಡೆಯಿಂದ ನಮಗೆ ಭಾರತದ ಶ್ರೇಷ್ಟ ವಿಜಯದ ಕಥೆಯನ್ನು ವ್ಯಾಪಕವಾಗಿ ಪ್ರೇಕ್ಷಕರಿಗೆ ತೋರಿಸಲು ಸಾಧ್ಯವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್​ ದೇವ್​ ನೇತೃತ್ವದ ತಂಡವು 1983ರಲ್ಲಿ ವಿಶ್ವಕಪ್ ಗೆಲ್ಲುವಲ್ಲಿ ಯಾವೆಲ್ಲ ರೀತಿಯ ಕಷ್ಟವನ್ನು ಪಟ್ಟಿದೆ ಎಂಬುದನ್ನು ಎಳೆ ಎಳೆಯಾಗಿ ತೋರಿಸಲಾಗಿದೆ.

ರಿಲಾಯನ್ಸ್​ ಎಂಟರ್​ಟೈನ್ಮೆಂಟ್​ ಹಾಗೂ ಫ್ಯಾಂಟಮ್​ ಫಿಲ್ಮಂ ಪ್ರಸ್ತುತ ಪಡಿಸುವ 83 ಸಿನಿಮಾವು ಇದೇ ಶುಕ್ರವಾರದಂದು ಸಿನಿಮಾ ಹಾಲ್​ಗಳಲ್ಲಿ ಪ್ರದರ್ಶನ ಕಾಣಲಿದೆ. ಹಿಂದಿ,‌ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್​ ಆಗುತ್ತಿದೆ.

ಈ ಸಿನಿಮಾದಲ್ಲಿ ಪಂಕಜ್​ ತ್ರಿಪಾಠಿ, ತಾಹಿರ್​ ರಾಜ್​ ಭಾಸಿನ್​, ಜೀವಾ, ಸಕಿಬ್​ ಸಲೀಮ್​, ಜತಿನ್​ ಸರ್ನಾ, ಚಿರಾಗ್ ಪಾಟೀಲ್​, ದಿನಕರ್ ಶರ್ಮಾ, ನಿಶಾಂತ್​ ದಹಿಯಾ, ಸಂಧು, ಸಾಹಿಲ್​ ಖತ್ತಾರ್​, ಆ್ಯಮಿ ವಿರ್ಕ್​, ಆದಿನಾಥ್​ ಕೊಠಾರೆ, ಧೈರ್ಯ ಕರ್ವಾ ಹಾಗೂ ಆರ್​.ಭದ್ರಿ ನಟಿಸಿದ್ದಾರೆ.

ನಟಿ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಪಿಲ್ ದೇವ್​ ಪತ್ನಿ ರೋಮಿಯಾಗಿ ನಟಿಸಿರುವ ದೀಪಿಕಾ ವಿಶೇಷ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...