alex Certify BIG NEWS: 36 ವರ್ಷಗಳ ಹಿಂದಿನ ಕಪಿಲ್ ದೇವ್ ವಿಶ್ವಕಪ್ ದಾಖಲೆ ಮುರಿದ ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 36 ವರ್ಷಗಳ ಹಿಂದಿನ ಕಪಿಲ್ ದೇವ್ ವಿಶ್ವಕಪ್ ದಾಖಲೆ ಮುರಿದ ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್

ಧರ್ಮಶಾಲಾ: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ನೆದರ್ಲೆಂಡ್ಸ್ ಮಣಿಸಿ ಅಚ್ಚರಿ ಮೂಡಿಸಿದೆ.

ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸ್ಕಾಟ್ ಎಡ್ವರ್ಡ್ಸ್ ಅಜೇಯ 78 ರನ್ ಗಳಿಸಿದ್ದಾರೆ. ಈ ಮೂಲಕ ಅವರು ಭಾರತದ ಕಪಿಲ್ ದೇವ್ ದಾಖಲೆ ಮುರಿದಿದ್ದಾರೆ.

ಎಡ್ವರ್ಡ್ಸ್ ಅವರ 78* ವಿಶ್ವಕಪ್ ಇತಿಹಾಸದಲ್ಲಿ ನಂ. 7 ಅಥವಾ ಅದಕ್ಕಿಂತ ಕಡಿಮೆ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ನಾಯಕನ ಗರಿಷ್ಠ ಸ್ಕೋರ್ ಆಗಿದೆ. 1987 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 72* ರನ್ ಗಳಿಸಿದ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು ಡಚ್ ನಾಯಕ ಮೀರಿಸಿದ್ದಾರೆ.

ವಿಶ್ವಕಪ್‌ನಲ್ಲಿ ನಂ.7 ಅಥವಾ ಅದಕ್ಕಿಂತ ಕಡಿಮೆ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ನಾಯಕರ ಗರಿಷ್ಠ ಸ್ಕೋರ್

78* – ಸ್ಕಾಟ್ ಎಡ್ವರ್ಡ್ಸ್ (NED vs SA), 2023

72* – ಕಪಿಲ್ ದೇವ್ (IND vs NZ), 1987

72* – ಹೀತ್ ಸ್ಟ್ರೀಕ್ (ZIM vs NZ), 2003

68 – ದಸುನ್ ಶನಕ (SL vs SA), 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...